ಪ್ರಭುದೇವ ನಿರ್ದೇಶನದಲ್ಲಿ ಸಲ್ಮಾನ್‌ರ ವಾಂಟೆಡ್!

IFM
ಸಲ್ಮಾನ್ ಖಾನ್ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಸಲ್ಮಾನ್ ಖಾನ್, ಆಯೇಷಾ ಟಕಿಯಾ ಅಜ್ಮಿ ಅಭಿನಯದ ವಾಂಟೆಡ್ ಚಿತ್ರ ಹೊರಬರಲಿದೆ. ಆ ಮೂಲಕ ರಿಯಲ್ ಲೈಫ್ ಬ್ಯಾಡ್ ಬಾಯ್ ಆಗಿದ್ದ ಸಲ್ಮಾನ್ ರೀಲ್ ಲೈಫ್‌ನಲ್ಲೂ ಬ್ಯಾಡ್ ಬಾಯ್ ಆಗಲಿದ್ದಾರೆ.

ವಾಂಟೆಡ್ ಚಿತ್ರ ಭೂಗತ ಲೋಕದ ಗ್ಯಾಂಗ್ಸ್ಟರ್‌ಗಳ ಕಥಾನಕವನ್ನು ಹೊಂದಿದೆ. ಇಲ್ಲಿ ರಾಧೆ (ಸಲ್ಮಾನ್ ಖಾನ್) ಒಬ್ಬ ಭಾರೀ ಗ್ಯಾಂಗ್‌ಸ್ಟರ್. ಈತ ಒಬ್ಬ ಶಾರ್ಪ್ ಶೂಟರ್ ಅಷ್ಟೇ ಅಲ್ಲ, ಶಾರ್ಪ್ ಆಗಿರುವ ಬುದ್ಧಿಮತ್ತೆಯನ್ನೂ ಹೊಂದಿರುವಾತ. ಗಣಿಭಾಯಿ (ಪ್ರಕಾಶ್ ರಾಜ್) ಬಳಿ ಕೆಲಸ ಮಾಡುವ ರಾಧೆ ಗಣಿ ಭಾಯಿಯ ಎಲ್ಲಾ ಶತ್ರುಗಳನ್ನು ಏಕಾಂಗಿಯಾಗಿ ಮಣಿಸುತ್ತಾನೆ. ಇಂತಿಪ್ಪ ರಾಧೆಗೆ ಹೀಗಾಗಿ ಶತ್ರುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ.

IFM
ಹೀಗಿದ್ದಾಗ ಒಮ್ಮೆ ಸುಂದರಳಾದ ಜಾಹ್ನವಿ (ಆಯೇಶಾ ಟಕಿಯಾ)ಗೆ ರಾಧೆ (ಸಲ್ಮಾನ್) ಮೇಲೆ ಪ್ರೀತಿ ಅಂಕುರಿಸುತ್ತದೆ. ಇದೇ ಸಂದರ್ಭ ಇನ್ಸ್‌ಪೆಕ್ಟರ್ ತಲ್ಪಡೆ (ಮಹೇಶ್ ಮಂಜ್ರೇಕರ್)ಯ ಕಾಮುಕ ದೃಷ್ಟಿ ಕೂಡಾ ಜಾಹ್ನವಿಯ ಮೇಲೆ ಬೀಳುತ್ತದೆ. ಆದರೆ ಜಾಹ್ನವಿ ರಾಧೆಯನ್ನು ಪ್ರೀತಿಸುತ್ತಿದ್ದಾಳೆಂಬ ವಿಚಾರ ತಲ್ಪಡೆಗೆ ಗೊತ್ತಿರುವುದಿಲ್ಲ

ಹೀಗೆ ಮುಂಬೈಯಲ್ಲಿ ಗ್ಯಾಂಗ್‌ಸ್ಟರ್‌ಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಸಾಂತಿಯ ನಿಟ್ಟುಸಿರು ಬಿಡಲು ಜನರು ಹವಣಿಸುತ್ತಾರೆ. ಹೀಗಾಗಿ ಕಮಿಷನರ್ ಅಷ್ರಫ್ ಖಾನ್ ಮುಂಬೈ ನಗರಿಯನ್ನು ಕ್ರೈಂ ಮುಕ್ತ ನಗರವನ್ನಾಗಿ ರೂಪಿಸಲು 200 ಮಂದಿ ಕ್ರಿಮಿನಲ್‌ಗಳನ್ನು ಬಂಧಿಸುತ್ತಾನೆ. ಮುಂದೇನಾಗುತ್ತದೆ ಹಾಗೂ ರಾಧೆಯ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬುದನ್ನು ನೋಡಲ ಚಿತ್ರ ವೀಕ್ಷಿಸಲೇಬೇಕು.
IFM


ವಿಶೇಷವೆಂದರೆ ಈ ಚಿತ್ರ ನಿರ್ದೇಶಿಸುತ್ತಿರುವುದು ದಕ್ಷಿಣ ಭಾರತೀಯ ನಟ ಪ್ರಭುದೇವ. ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಪ್ರಭುದೇವ್ ಸಾಕಷ್ಟು ಬಾಲಿವುಡ್ ಚಿತ್ರಗಳಲ್ಲಿ ಕೊರಿಯೋಗ್ರಾಫರ್ ಆಘಿಯೂ ಕೆಲಸ ಮಾಡಿದ್ದಾರೆ. ವಾಂಟೆಡ್ ಪ್ರಭುದೇವ ನಿರ್ದೇಶನದ ಮೊದಲ ಹಿಂದಿ ಚಿತ್ರ. ನಿರ್ಮಾಣದ ಜವಾಬ್ದಾರಿಯನ್ನು ಬೋನಿ ಕಪೂರ್ ಹೊತ್ತುಕೊಂಡಿದ್ದಾರೆ. ಚಿತ್ರ ಸೆಪ್ಟೆಂಬರ್ 18ರಂದು ಬಿಡುಗಡೆ ಕಾಣಲಿದೆ.

ವೆಬ್ದುನಿಯಾವನ್ನು ಓದಿ