ಎಲ್ಲಾ ರಾಜ್ಯಗಳಲ್ಲೂ ʼಯೂನಿಟಿ ಮಾಲ್ʼ

ಶನಿವಾರ, 4 ಫೆಬ್ರವರಿ 2023 (11:51 IST)
ನವದೆಹಲಿ : ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ʼಯೂನಿಟಿ ಮಾಲ್ʼಗಳನ್ನು ತೆರೆದು, ದೇಶೀಯ ಹಾಗೂ ಪ್ರಾದೇಶಿಕ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆದಿದೆ.

ಏನಿದು ʼಯೂನಿಟಿ ಮಾಲ್ʼ?

2023-24ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯೂನಿಟಿ ಮಾಲ್ಗಳನ್ನು ತೆರೆದು ಆಯಾ ರಾಜ್ಯದ ಪ್ರಾದೇಶಿಕ (ಔಆಔP- ಒಂದು ಜಿಲ್ಲೆ, ಒಂದು ಉತ್ಪನ್ನ),

ಭೌಗೋಳಿಕ ಸೂಚಿಕೆ ಮಾನ್ಯತೆ ಪಡೆದ ಉತ್ಪನ್ನಗಳು ಮತ್ತು ಇತರ ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಎಲ್ಲಾ ರಾಜ್ಯಗಳ ಉತ್ಪನ್ನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಯೂನಿಟಿ ಮಾಲ್ಗಳಲ್ಲಿ ದೇಶೀಯ ಹಾಗೂ ಆಯಾ ರಾಜ್ಯದ ಪ್ರಾದೇಶಿಕ ಪ್ರಸಿದ್ಧವಾಗಿರುವ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಯೂನಿಟಿ ಮಾಲ್ ತೆರೆದರೆ, ಅಲ್ಲಿ ಚನ್ನಪಟ್ಟಣದ ಗೊಂಬೆ, ಮೈಸೂರು ರೇಷ್ಮೆ ಸೀರಿ, ಬ್ಯಾಡಗಿ ಮೆಣಸಿನಕಾಯಿ ಹೀಗೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ