ಸಿಲಿಂಡರ್ ಅಭಾವ ಸರಿಪಡಿಸಲು ಪ್ರಧಾನಿ ಮೋದಿ ಮೊರೆ ಹೋದ ಹೋಟೆಲ್ ಮಾಲಿಕರು

Krishnaveni K

ಗುರುವಾರ, 19 ಮಾರ್ಚ್ 2026 (15:18 IST)
ಬೆಂಗಳೂರು: ಎಲ್ ಪಿಜಿ ಸಿಲಿಂಡರ್ ಅಭಾವದಿಂದಾಗಿ ಸಂಕಷ್ಟಕ್ಕೀಡಾಗಿರುವ ಬೆಂಗಳೂರು ಹೋಟೆಲ್ ಮಾಲಿಕರ ಅಸೋಸಿಯೇಷನ್ ಈಗ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣದಿಂದ ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ ಎದುರಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹೋಟೆಲ್ ಮುಚ್ಚುವ ಪರಿಸ್ಥಿತಿಗೆ ಬಂದಿದೆ.

ಈ ಹಿನ್ನಲೆಯಲ್ಲಿ ಬೆಂಗಳೂರು ಹೋಟೆಲ್ ಮಾಲಿಕರು ಈಗ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಸಿಲಿಂಡರ್ ಪೂರೈಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಢಿದೆ.

ಹೋಟೆಲ್ ಗಳು ಮುಚ್ಚುವುದರಿಂದ ಲಕ್ಷಾಂತರ ಕಾರ್ಮಿಕರ ಬದುಕೂ ಬೀದಿಗೆ ಬೀಳಲಿದೆ. ನಾವು ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿದವರಾಗಿದ್ದೇವೆ. ಬೆಂಗಳೂರು ಒಂದೇ ನಗರದಲ್ಲಿ 40,000 ಕ್ಕೂ ಅಧಿಕ ಹೋಟೆಲ್ ಗಳಿವೆ. ಹೀಗಾಗಿ ದೈನಂದಿನ ಅಗತ್ಯ ಶೇ.50 ರಷ್ಟಾದರೂ ಸಿಲಿಂಡರ್ ಪೂರೈಸಿ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ