ಗೌರಪೇಟೆ ಬಳಿಯ ಪೈದಾಪುಲಿ ಬಳಿ ಇಟ್ಟಿಗೆ ನಿರ್ಮಾಣ ಕೆಲಸ ಮಾಡುತ್ತಿದ್ದ ಅವರು ಮುಂಗಡವಾಗಿ 40,000ರೂಪಾಯಿಯನ್ನು ಪಡೆದಿದ್ದರು. ಕಳೆದ ಕೆಲ ದಿನಗಳ ಹಿಂದೆ ಜುಗಲ್‌ಗೆ ಜ್ವರ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸಿಗದೆ ಅವನ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ತಾನು ಮುಂಗಡವಾಗಿ ಕೊಟ್ಟಿದ್ದ ಹಣದಲ್ಲಿ 30,000 ರೂಪಾಯಿಗಳನ್ನು ಹಿಂಪಡೆದ ಮಾಲೀಕ ಮರಳಿ ಹಳ್ಳಿಗೆ ಹಿಂತಿರುಗಲು ಹಣ ಕೊಟ್ಟು ಕಳುಹಿಸಿದ್ದಾನೆ.