ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದ ಐಎಎಸ್ ಅಧಿಕಾರಿ ಜೈಲಿಗೆ

ಶುಕ್ರವಾರ, 15 ಜುಲೈ 2016 (15:47 IST)
2013ರ ಐಎಎಸ್ ಅಧಿಕಾರಿ ಜಿತೇಂದ್ರ ಗುಪ್ತಾ ಟ್ರಕ್ ಚಾಲಕನೊಬ್ಬನಿಂಗ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ರೆಡ್‌ ಹ್ಯಾಂಡಾಗಿ ಸಿಕ್ಕು ಬಿದ್ದು ಜೈಲಿಗೆ ಸೇರಿರುವ ಘಟನೆ ಕೈಮೂರ್ ಜಿಲ್ಲೆಯಲ್ಲಿ ವರದಿಯಾಗಿದೆ.
 
ಪಂಜಾಬ್ ಮೂಲದ ಕಂಪೆನಿಯ ಟ್ರಕ್ ಚಾಲಕ ಜಾಗೃತಾ ದಳದ ಅಧಿಕಾರಿಗಳನ್ನು ಸಂಪರ್ಕಿಸಿ ರಾಷ್ಟ್ರೀಯ ಹೆದ್ದಾರಿ 2 ರ ಮೇಲೆ ವಶಕ್ಕೆ ತೆಗೆದುಕೊಳ್ಳಲಾದ ನಾಲ್ಕು ಟ್ರಕ್‌ಗಳನ್ನು ಬಿಡುಗಡೆಗೊಳಿಸಲು 1.45 ಲಕ್ಷ ರೂಪಾಯಿ ಹಣ ನೀಡುವಂತೆ ಅಧಿಕಾರಿ ಒತ್ತಾಯಿಸುತ್ತಿದ್ದಾರೆ ಎಂದು ದೂರು ನೀಡಿದ್ದಾನೆ.
 
ಜಮಶೆಡ್‌ಪುರ್‌ದಿಂದ ಪಂಜಾಬ್‌ಗೆ ಕಬ್ಬಿಣದ ರಾಡ್‌ಗಳನ್ನು ಸಾಗಾಣೆ ಮಾಡುತ್ತಿದ್ದ ನಾಲ್ಕು ಟ್ರಕ್‌ಗಳನ್ನು ಎಸ್‌ಡಿಓ ಆಗಿದ್ದ ಗುಪ್ತಾ ಓವರ್‌ಲೋಡ್ ನೆಪದಲ್ಲಿ ವಶಕ್ಕೆ ತೆಗೆದುಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.   
 
ವಶಪಡಿಸಿಕೊಳ್ಳಲಾದ ಟ್ರಕ್‌ಗಳನ್ನು ಕಾನೂನಿನ ನಿಯಮದಂತೆ ಪೊಲೀಸ್ ಠಾಣೆಯ ಹತ್ತಿರದಲ್ಲಿ ನಿಲ್ಲಿಸಿರಲಿಲ್ಲ ಮತ್ತು ವಶಕ್ಕೆ ತೆಗೆದುಕೊಂಡ ಬಗ್ಗೆ ಯಾವುದೇ ಸರಕಾರಿ ದಾಖಲಾತಿಗಳನ್ನು ನೀಡಿರಲಿಲ್ಲ. 
 
ಐಎಎಸ್ ಅಧಿಕಾರಿ ಗುಪ್ತಾ ತನ್ನ ಕಾರು ಚಾಲಕ ಸಂಜಯ್ ಕುಮಾರ್ ಮತ್ತು ಹೋಮ್‌ಗಾರ್ಡ್ ಸಿಬ್ಬಂದಿ ಅಶೋಕ್ ಶ್ರೀವಾಸ್ತವಾ ಅವರ ಮೂಲಕ ಟ್ರಕ್ ಚಾಲಕನೊಂದಿಗೆ ಸಂಧಾನ ನಡೆಸಿ 1.45 ಲಕ್ಷ ರೂಪಾಯಿಗಳ ಲಂಚ ನೀಡುಂತೆ ಒತ್ತಾಯಿಸಿದ್ದರು. ಕೊನೆಗೆ ಸಂಧಾನ 80 ಸಾವಿರ ರೂಪಾಯಿಗಳಿಗೆ ಅಂತ್ಯವಾಗಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ