ಫರ್ಮಾನ್ ಖಾನ್ ಜೊತೆ ಕುಂಭಮೇಳದ ಮೊನಾಲಿಸಾ ಮದುವೆ: ಮದುವೆಗೆ ಹಿಂದೂ ಹುಡುಗಿಯೇ ಬೇಕಾ ಎಂದ ನೆಟ್ಟಿಗರು Video

Krishnaveni K

ಗುರುವಾರ, 12 ಮಾರ್ಚ್ 2026 (09:25 IST)
Photo Credit: X
ತಿರುವನಂತಪುರಂ: ಕುಂಭಮೇಳ ಖ್ಯಾತಿಯ ಮೊನಾಲಿಸಾ ಮದುವೆ ಆಕೆಯ ಗೆಳೆಯ ಫರ್ಮಾನ್ ಖಾನ್ ಜೊತೆ ನಡೆದಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಕೇರಳ ಸ್ಟೋರಿ 2 ಎಂದು ಟಾಂಗ್ ಕೊಟ್ಟಿದ್ದಾರೆ.

ಕುಂಭಮೇಳದಲ್ಲಿ ರುದ್ರಾಕ್ಷಿಗಳನ್ನು ಮಾರುವಾಗ ಕ್ಯಾಮರಾ ಕಣ್ಣಿಗೆ ಬಿದ್ದು ರಾತ್ರೋ ರಾತ್ರಿ ಫೇಮಸ್ ಆಗಿದ್ದ ಮೊನಾಲಿಸಾ ಬಳಿಕ ಬಾಲಿವುಡ್ ಗೂ ಹೋಗಿ ಬಂದಿದ್ದಾಳೆ. ಆದರೆ ಎಲ್ಲೂ ಆಕೆ ಸ್ಥಿರವಾಗಿ ನಿಂತಿಲ್ಲ. ಇದೀಗ ದಿಡೀರ್ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾಳೆ.

ಅನ್ಯಧರ್ಮೀಯನ ಜೊತೆ ಮದುವೆಯಾಗಿದ್ದು ಇದಕ್ಕೆ ಕುಟುಂಬದವರಿಂದ ವಿರೋಧವಿತ್ತು ಎನ್ನಲಾಗಿದೆ.  ಈ ಹಿನ್ನಲೆಯಲ್ಲಿ ಮೊನಾಲಿಸಾ, ಫರ್ಮಾನ್ ಕೇರಳದ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಪೊಲೀಸರ ಭದ್ರತೆ ಪಡೆದು ಮದುವೆಯಾಗಿದ್ದಾರೆ.

ಮೊನಾಲಿಸಾ ದಿಡೀರ್ ಮದುವೆ ವಿಡಿಯೋ ನೋಡುತ್ತಿದ್ದಂತೇ ನೆಟ್ಟಿಗರು ಇದು ನಿಜವಾದ ಕೇರಳ ಸ್ಟೋರಿ 2 ಎಂದಿದ್ದಾರೆ. ಮದುವೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಫರ್ಮಾನ್, ನಮ್ಮದು 6 ತಿಂಗಳ ಪ್ರೀತಿ, ಆದರೆ ಇದು 60 ವರ್ಷಕ್ಕೆ ಸಮ. ನಾವಿಬ್ಬರೂ ಚೆನ್ನಾಗಿ ಬದುಕುತ್ತೇವೆ ಎಂದಿದ್ದಾರೆ. ಆದರೆ ನೆಟ್ಟಿಗರು ಈ ಮದುವೆ ಬಗ್ಗೆ ಕಿಡಿ ಕಾರಿದ್ದು ನಿಮಗೆ ಮದುವೆಯಾಗಲು ಹಿಂದೂ ಹುಡುಗಿಯರೇ ಸಿಗುತ್ತಾರಾ ಎಂದಿದ್ದಾರೆ.

pic.twitter.com/78H4UxcyBe

 

— News Arena India (@NewsArenaIndia) March 11, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ