ರಷ್ಯಾ ರಾಯಭಾರಿ ಆ್ಯಂಡ್ರ್ಯೂ ಕಾರ್ಲೋ ಅವರ ಹತ್ಯೆಗೆ ಸಂಬಂಧಿಸಿದಂತೆ ಟರ್ಕಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಕಾರ್ಲೋ ಹತ್ಯೆಗೈದ 22 ವರ್ಷದ ಆಫ್ ಡ್ಯೂಟಿ ಪೊಲೀಸ್ 'ಮೆವ್ಲಟ್ ಮೆರ್ಟ್ ಅಲ್ಟಿನ್‌ಟಾಸ್' ಸಂಬಂಧಿಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಟರ್ಕಿಯ ಭದ್ರತಾ ಮೂಲಗಳು ತಿಳಿಸಿವೆ.
ಮೃತ ದಾಳಿಕೋರನ ತಂದೆ-ತಾಯಿ, ಸಹೋದರಿ, ಮತ್ತಿಬ್ಬರು ಸಂಬಂಧಿಕರು, ಸಹೋದ್ಯೋಗಿ ಸೇರಿದಂತೆ 6 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಅಂಕಾರಾದ ಕಲಾ ಗ್ಯಾಲರಿಯಲ್ಲಿ ಸೋಮವಾರ ಸಂಜೆ ಭಾಷಣ ಮಾಡುತ್ತಿದ್ದ ಕಾರ್ಲೋ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಈ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಆರೋಪಿಯನ್ನು ಸಹ ಪೊಲೀಸರು ಹತ್ಯೆ ಮಾಡಿದ್ದಾರೆ.
ಗಂಭೀರವಾಗಿ ಗಾಯಕೊಂಡ ಕಾರ್ಲೋ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮತ್ತೆ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಪೊಲೀಸ್ ಅಧಿಕಾರಿಯಾಗಿದ್ದು ಆ ಸಮಯದಲ್ಲಿ ಕರ್ತವ್ಯದ ಮೇಲಿರಲಲ್ಲಿ, ಎಂದು ಹೇಳಲಾಗುತ್ತಿದೆ. ಶೂಟ್ ಧರಿಸಿದ್ದ ಆತ ಏಕಾಏಕಿ ಒಳ ನುಗ್ಗಿ ರಾಯಭಾರಿ ಅಧಿಕಾರಿ ಬಳಿ ಬಂದು, " ಅಲ್ಲಾಹೋ ಅಕ್ಬರ್" ಎನ್ನುತ್ತ ಕನಿಷ್ಠ 8 ಬಾರಿ ಗುಂಡು ಹಾರಿಸಿದ್ದಾನೆ. ಬಳಿಕ ''ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ. ನಮ್ಮ ನಗರಗಳು ಭದ್ರವಾಗಿರುವುವರೆಗೆ ನೀವು ಭದ್ರತೆಯನ್ನು ಅನುಭವಿಸುವ ಹಾಗಿಲ್ಲ. ಸಾವೊಂದು ನನ್ನನ್ನು ಇಲ್ಲಿಂದ ಕರೆದೊಯ್ಯಬಹುದು. ಆದರೆ ಸಂಕಷ್ಟವನ್ನು ಅನುಭವಿಸುತ್ತಿರುವವರೆಲ್ಲರೂ ಇದರ ಬೆಲೆಯನ್ನು ತೆರಲಿದ್ದಾರೆ", ಎಂದು ಕೂಗಿದ್ದಾನೆ.
ಸಿರಿಯಾ ಆಂತರಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು. ಸಿರಿಯನ್ ಸಿವಿಲಿಯನ್ ವಾರ್‌ನಲ್ಲಿ ರಷ್ಯಾ ಸೈನ್ಯ ಕೂಡ ಭಾಗಿಯಾಗಿರುವ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಊಹಿಸಲಾಗಿದೆ.
ಇಲ್ಲಿಯವರೆಗೆ ಘಟನೆಯ ಹೊಣೆಯನ್ನು ಯಾವ ಸಂಘಟನೆ ಕೂಡ ಹೊತ್ತುಕೊಂಡಿಲ್ಲ. ಹೀಗಾಗಿ ಘಟನೆಯ ಹಿಂದಿನ ನಿಜವಾದ ಉದ್ದೇಶ ತನಿಖೆಯ ಬಳಿಕವಷ್ಟೇ ತಿಳಿದು ಬರಲಿದೆ. ಇದು ಭಯೋತ್ಪಾದಕ ಕೃತ್ಯ ಎಂದುಕೊಂಡಿದ್ದೇವೆ. ಆದರೆ ಉಗ್ರರ ವಿರುದ್ಧದ ನಡೆಯನ್ನು ನಾವು ಹಿಂತೆದುಕೊಳ್ಳುವುದಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ತಿಳಿಸಿದ್ದಾರೆ.
ಇದರ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟ ಈ ಹತ್ಯೆಗೆ ನಾವು ನೀಡುವ ಒಂದೇ ಪ್ರತಿಕ್ರಿಯೆ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮುಂದುವರೆಸುವುದು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ