ಸನಾತನ ಧರ್ಮವೆಂದರೆ ಡೆಂಘಿ, ಕೊರೋನಾ ಇದ್ದಂತೆ ಎಂದಿದ್ದ ಉದಯನಿಧಿ ಸ್ಟಾಲಿನ್ ರಿಂದ ಟೆಂಪಲ್ ರನ್ Video

Krishnaveni K

ಬುಧವಾರ, 8 ಏಪ್ರಿಲ್ 2026 (13:57 IST)
Photo Credit: X
ಚೆನ್ನೈ: ಸನಾತನ  ಧರ್ಮವೆಂದರೆ ಡೆಂಘಿ, ಕೊರೋನಾ ಇದ್ದಂತೆ. ಇದನ್ನು ನಿವಾರಣೆ ಮಾಡಬೇಕು ಎಂದು ಭಾಷಣ ಬಿಗಿದಿದ್ದ ಡಿಎಂಕೆ ನಾಯಕ, ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಈಗ ಟೆಂಪಲ್ ರನ್ ಮಾಡುತ್ತಿದ್ದಾರೆ.

ತಮಿಳುನಾಡಿನಲ್ಲಿ ವಿಧಾನಸಭೆಗೆ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಡಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳೂ ಈಗ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಈ ನಡುವೆ ಉದಯನಿಧಿ ಸ್ಟಾಲಿನ್ ಪ್ರಚಾರದ ನಡುವೆ ದೇವಾಲಯವೊಂದಕ್ಕೆ ತೆರಳಿ ತಿಲಕವಿರಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.

ತಮ್ಮ ಕಾರ್ಯಕರ್ತರೊಂದಿಗೆ ತಲೆಗೆ ರುಮಾಲು ಕಟ್ಟಿಕೊಂಡು ಉದಯನಿಧಿ ಸ್ಟಾಲಿನ್ ದೇವಾಲಯವೊಂದಕ್ಕೆ ಭೇಟಿ ನೀಡಿದ್ದು ಈ ವೇಳೆ ಅಲ್ಲಿನ ಅರ್ಚಕರು ತಿಲಕವಿಟ್ಟಿದ್ದಾರೆ. ಅವರ ಬಳಿ ತಲೆಬಾಗಿ ತಿಲಕವಿರಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಉದಯನಿಧಿ ಆಪ್ತರು ದೇವಾಲಯದಿಂದ ಬಂದ ತಕ್ಷಣ ಅವರು ತಿಲಕ ಅಳಿಸಿ ಹಾಕಿದ್ದಾರೆ ಎಂದಿದ್ದಾರೆ.

ಅದೇನೇ ಇದ್ದರೂ ಒಂದು ಕಾಲದಲ್ಲಿ ಹಿಂದೂ ಧರ್ಮವನ್ನು ಡೆಂಗ್ಯೂ, ಕೊರೋನಾದಂತಹ ಮಾರಕ ವೈರಸ್ ಗೆ ಹೋಲಿಸಿ ಅಪಮಾನಿಸಿದ್ದ ಉದಯನಿಧಿ ಈಗ ತಾವೇ ದೇವಾಲಯಕ್ಕೆ ತೆರಳಿರುವುದು ಚರ್ಚೆಗೆ ಗ್ರಾಸವಾಗಿದೆ. ಇದೆಲ್ಲವೂ ಚುನಾವಣೆ ಗಿಮಿಕ್ಕಾ ಎಂದು ಪ್ರಶ್ನೆ ಮಾಡುವಂತೆ ಮಾಡಿದೆ.


pic.twitter.com/ssRTxIZYiv

 

— BIG TV Breaking News (@bigtvtelugu) April 8, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ