ದಮ್ ಮೇಲೆ ದಮ್ ಹೊಡೆಯುವ ಈತ ಸಿಗರೇಟು ಬಾಬಾ ಅಂತೆ: ಜನ ಮರುಳೋ ಜಾತ್ರೆ ಮರುಳೋ Video
ನಮ್ಮ ದೇಶದಲ್ಲಿ ಕೆಲವರು ನಂಬಿಕೆಗಿಂತ ಮೂಡನಂಬಿಕೆಗಳಿಗೆ ಮರುಳಾಗುವುದೇ ಹೆಚ್ಚು. ಎಷ್ಟೇ ಮೋಸ, ವಂಚನೆ ನಡೆದರೂ ಇಂತಹ ನಕಲಿ ಬಾಬಗಳಿಗೆ ಮಾರು ಹೋಗುವುದು ಮಾತ್ರ ತಪ್ಪಲ್ಲ. ಅಂತಹದ್ದೇ ಸಿಗರೇಟು ಬಾಬನ ವಿಡಿಯೋ ಇದು.
ಇಲ್ಲೊಬ್ಬ ಬಾಲಕ ನೆಲದ ಮೇಲೆ ಮಂಡಿಯೂರಿ ಕುಳಿತು ವಿಚಿತ್ರವಾಗಿ ಮೈ ಎಲ್ಲಾ ಅಲುಗಾಡಿಸುತ್ತಿದ್ದಾನೆ. ಆತನಿಗೆ ಒಬ್ಬರಾದ ಮೇಲೆ ಒಬ್ಬರು ಸಿಗರೇಟು ಬಾಯಿಗಿಡುತ್ತಾರೆ. ಆತ ಅದನ್ನು ವಿಚಿತ್ರವಾಗಿ ಸೇದಿ ಹೊಗೆ ಉಗುಳುತ್ತಾನೆ. ಈ ವೇಳೆ ಸುತ್ತಲೂ ಇರುವ ಜನ ಆತನಿಗೆ ನೋಟಿನ ಕಂತೆಯನ್ನೇ ಎಸೆಯುತ್ತಾರೆ.
ಈ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ ಅಪ್ರಾಪ್ತನ ಬಾಲಕನಿಗೆ ಈ ಮಟ್ಟಿಗೆ ಸಿಗರೇಟು ಸೇದಲು ಅವಕಾಶ ನೀಡುವುದೇ ಅಪರಾಧ. ಅದರ ಮೇಲಿಂದ ಈತ ತಾವು ಕೊಟ್ಟ ಸಿಗರೇಟು ಸೇದಿದರೆ ತಮ್ಮ ಮನಸ್ಸಿನಲ್ಲಿರುವ ಕೋರಿಕೆ ಈಡೇರುತ್ತದೆ ಎಂಬ ಮರುಳು ನಂಬಿಕೆ ಜನರದ್ದು. ಇಂಥಾ ಜನರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.