ಅವಲಕ್ಕಿ ಹೇಗೆ ಪ್ಯಾಕ್ ಮಾಡ್ತಾರೆ ಎಂದು ಈ ವಿಡಿಯೋ ನೋಡಿದರೆ ಗಾಬರಿಯಾಗ್ತೀರಿ Video

Krishnaveni K

ಗುರುವಾರ, 19 ಫೆಬ್ರವರಿ 2026 (10:00 IST)
Photo Credit: X
ಬೆಂಗಳೂರು: ಬೆಳಗಿನ ತಿಂಡಿಗೆ ಏನು ಮಾಡುವುದು ಎಂದರೆ ಸುಲಭವಾಗಿ ಚಿತ್ರಾನ್ನ ಬಿಟ್ಟರೆ ನಮಗೆ ಹೊಳೆಯುವುದು ಅವಲಕ್ಕಿ ಉಪ್ಪಿಟ್ಟು. ಆದರೆ ಅವಲಕ್ಕಿ ಹೇಗೆ ಪ್ಯಾಕ್ ಮಾಡ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ನೀವು ಗಾಬರಿಯಾಗೋದು ಗ್ಯಾರಂಟಿ.

ಇತ್ತೀಚೆಗಿನ ದಿನಗಳಲ್ಲಿ ಪ್ಯಾಕೆಟ್ ನಲ್ಲಿ ಸೀಲ್ ಆಗಿ ಬರುವ ಆಹಾರ ವಸ್ತುಗಳು ತಕ್ಕಮಟ್ಟಿಗೆ ಸೇಫ್ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಈ ವಿಡಿಯೋ ನೋಡಿದರೆ ಅದು ಸುಳ್ಳೆನಿಸುತ್ತದೆ. ಫ್ಯಾಕ್ಟರಿಯೊಂದರಲ್ಲಿ ಅವಲಕ್ಕಿ ಪ್ಯಾಕ್ ಮಾಡುವ ವಿಡಿಯೋವೊಂದು ನಿಮಗೆ ಶಾಕ್ ಉಂಟು ಮಾಡಬಹುದು.

ಅವಲಕ್ಕಿ ಗುಡ್ಡೆ ಹಾಕಿಕೊಂಡು ಅದರ ಮೇಲೆಯೇ ಕೆಲವು ಕೆಲಸಗಾರರು ಕುಳಿತುಕೊಂಡಿರುತ್ತಾರೆ. ಬರಿಗೈಯಲ್ಲಿ ನೆಲದಿಂದ ಬಾಚಿ ಪ್ಯಾಕೆಟ್ ಒಳಗೆ ತುಂಬಿಸುತ್ತಾರೆ. ಈ ಪ್ಯಾಕೆಟ್ ಗಳನ್ನು ನಂತರ ಮೆಷಿನ್ ನಲ್ಲಿ ಸೀಲ್ ಮಾಡಲಾಗುತ್ತದೆ.

ಪ್ಯಾಕ್ ಮಾಡುವವರ ಮೈ, ಬಟ್ಟೆ ಎಲ್ಲವೂ ಕೊಳೆಯಾಗಿರುತ್ತದೆ.  ಅವರ ಮೈಯಲ್ಲೂ ಅವಲಕ್ಕಿ ಪೀಸ್ ಗಳು ಅಂಟಿಕೊಂಡಿರುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ವ್ಯಕ್ತಪಡಿಸಿದ್ದು ಅವಲಕ್ಕಿಯನ್ನು ಇನ್ನು ಹೇಗೆ ಸುರಕ್ಷಿತ ಎಂದು ನಂಬಿ ಸೇವಿಸೋದು ಎಂದು ಪ್ರಶ್ನೆ ಮಾಡಿದ್ದಾರೆ.

pic.twitter.com/EjIDdtEhT6

 

— TIMES NOW (@TimesNow) February 18, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ