ಪ್ರಿಯಕರನ ಜೊತೆ ವಾಗ್ವಾದದ ಬಳಿ ಇದ್ದಕ್ಕಿದ್ದಂತೆ ಗಂಗಾ ನದಿಗೆ ಹಾರಿದ ಯುವತಿ: Viral Video
ಈ ಘಟನೆ ನಡೆದಿರುವುದು ವಾರಣಾಸಿಯ ಗಂಗಾ ನದಿ ತಟದಲ್ಲಿ. ಗಂಗಾ ನದಿ ತಟದಲ್ಲಿ ಸಾಕಷ್ಟು ಬೋಟ್ ಗಳು, ಜನರೂ ಇದ್ದರು. ಓರ್ವ ಯುವಕ ಮತ್ತು ಯುವತಿ ಜೊತೆಗೆ ಇನ್ನೋರ್ವ ಯುವಕನೂ ಕೂತಿದ್ದರು. ಯಾವುದೋ ವಿಚಾರವಾಗಿ ಯುವಕ ಯುವತಿಯನ್ನು ಕೈಯಲ್ಲಿ ಬಳಸಿಟ್ಟುಕೊಂಡು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದ.
ಆರಂಭದಲ್ಲಿ ಎಲ್ಲವೂ ಕೂಲ್ ಆಗಿಯೇ ನಡೆಯುತ್ತಿತ್ತು. ಆದರೆ ವಾಗ್ವಾದ ಜೋರಾಗಿದ್ದು ಯುವಕ ಯುವತಿಗೆ ಕೈ ಮಾಡುತ್ತಾನೆ. ಈ ವೇಳೆ ಸಿಟ್ಟಿನಲ್ಲಿ ಏಳುವ ಯುವತಿ ನೇರವಾಗಿ ಗಂಗಾ ನದಿಗೇ ಹಾರಿಬಿಡುತ್ತಾಳೆ.
ಅದೃಷ್ಟವಶಾತ್ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೋಟ್ ಮ್ಯಾನ್ ಗಳಿರುತ್ತಾರೆ. ಯುವತಿಯನ್ನು ತಕ್ಷಣವೇ ಮೇಲೆತ್ತುವ ಕೆಲಸ ಮಾಡುತ್ತಾರೆ. ಹೀಗಾಗಿ ಆಕೆಯ ಜೀವವುಳಿಯುತ್ತದೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.