ನಿರಾಸೆ ಮೂಡಿಸಿದ ಮಹಿಳೆಯರ ರಿಲೆ ತಂಡ

ಶುಕ್ರವಾರ, 22 ಆಗಸ್ಟ್ 2008 (18:54 IST)
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ಸಂಜೆ ನಡೆದ ಮಹಿಳೆಯರ 400ಮೀ.ರಿಲೆ ಸ್ಪರ್ಧೆಯಲ್ಲಿ ಗುರಿ ತಲುಪಲಾಗದೆ ನಿರಾಸೆಯನ್ನು ಮೂಡಿಸಿದೆ.

ಭಾರತದ ರಿಲೆ ತಂಡದಲ್ಲಿ ಗೀತಾ,ಮಂಜಿತ್ ಕೌರ್,ಚೈತ್ರಾ ಸೋಮನ್ ಹಾಗೂ ಮನ್‌ದೀಪ್ ಕೌರ್ ಅವರು 3:28.83ಸೆಕೆಂಡ್ಸ್‌ಗಳಲ್ಲಿ ಓಡಿ ಗುರಿ ತಲುಪಲಾಗದೆ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.

400ಮೀ.ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ರಷ್ಯಾ 3:23.71ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರೆ,ಕ್ಯೂಬಾ 3:25.46 ಸೆಕೆಂಡ್ಸ್‌ಗಳಲ್ಲಿ ಗುರಿ ದ್ವಿತೀಯ ಸ್ಥಾನ, ಬ್ರಿಟನ್ 3:25.48ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರೆ,ಜರ್ಮನಿ 3:25.55ಸೆಕೆಂಡ್ಸ್‌ನೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು.

ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಪ್ರಸಕ್ತ ಸಾಲಿನಲ್ಲಿ ಒಂದು ಚಿನ್ನ,ಎರಡು ಕಂಚಿನ ಪದಕ ಪಡೆಯುವುದರೊಂದಿಗೆ ಕ್ರೀಡಾ ಇತಿಹಾಸದಲ್ಲಿಯೇ ನೂತನ ದಾಖಲೆ ಯನ್ನು ಬರೆದಿದೆ. ಆದರೆ ಇನ್ನೀಗ ಉಳಿದಿರುವ ರಿಲೆ ಸ್ಪರ್ಧೆಯಲ್ಲಿ ಭಾರತ ಯಾವುದೇ ನಿರೀಕ್ಷೆಯನ್ನು ಹೊಂದಂತಾಗಿದೆ.

ಶುಕ್ರವಾರ ನಡೆದ ರಿಲೆ ಸ್ಪರ್ಧೆಯಲ್ಲಿ ಭಾರತ ತಂಡ ನೀರಸ ಪ್ರದರ್ಶನ ನೀಡುವ ಮೂಲಕ ಬಹಳಷ್ಟು ನಿರಾಸೆ ಮೂಡಿಸಿದೆ. ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ತುಂಬಾ ನಿರೀಕ್ಷೆ ಯನ್ನು ಇಟ್ಟುಕೊಳ್ಳಲಾಗಿದ್ದ ಅಂಜು ಬಾಬ್ಬಿ ಜಾರ್ಜ್ ಸೇರಿದಂತೆ ಹಲವರು ಭಾರತದ ಪಾಲಿಗೆ ನಿರಾಸೆಯನ್ನೇ ತಂದಿತ್ತರು.

ವೆಬ್ದುನಿಯಾವನ್ನು ಓದಿ