ಸಿಹಿತಿಂಡಿ : ಬೆಸನ್‌‌‌‌ನ ಲಡ್ಡು

ಸೋಮವಾರ, 26 ಮೇ 2014 (16:37 IST)
ಒಂದು ಕಾಲವಿತ್ತು ಜನರು ಮನೆಯಲ್ಲಿ ಸಿದ್ದಪಡಿಸಿದ ಕಡಲೆ ಹಿಟ್ಟಿನ ಪದಾರ್ಥ ಸೇವನೆ ಮಾಡಿ ದಿನಪೂರ್ತಿ ಬಿಸಿಲಿನ್ನು ಎದುರಿಸಲು ಸಿದ್ದರಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಬೆಸನ್‌‌ನಿಂದ ಸಿದ್ದಪಡಿಸಿದ ಪದಾರ್ಥಗಳನ್ನು ಇಷ್ಟ ಪಡುತ್ತಿಲ್ಲ ಆದರೆ ಇವುಗಳನ್ನು ತಿನ್ನುವುದನ್ನು ಬಿಟ್ಟು ಪಿಜ್ಜಾ ತಿನ್ನುವುದು ಮತ್ತು ಕೋಲ್ಡ್ರಿಂಕ್‌ ಕುಡಿಯುವುದು ಹೆಚ್ಚು ಮಾಡುತ್ತಿದ್ದಾರೆ. ನಿಮಗಾಗಿ ಬೇಸನ್‌‌ ಲಡ್ಡು  ಮಾಡುವುದನ್ನು ತಿಳಿಸುತ್ತಿದ್ದೆವೆ , ಹಾಗಾದರೆ ಮುಂದೆ ಓದಿ. 
 
 
ಸಾಮಗ್ರಿ: 
250 ಗ್ರಾಂ ಬೆಸನ್‌‌ ( ಮಾರುಕಟ್ಟೆಯಲ್ಲಿ ಸಿದ್ದಪಡಿಸಿದ್ದು ಸಿಗುತ್ತದೆ), 250 ಗ್ರಾಂ ಪುಡಿ ಮಾಡಿದ ಸಕ್ಕರೆ, 100ಗ್ರಾಂ ತುಪ್ಪ , 1 ಚಮಚ ಪುಡಿಮಾಡಿದ ಏಲಕ್ಕಿ  ಮತ್ತು ಒಳ ದ್ರಾಕ್ಷಿ. 
 
 
ಮಾಡುವ ವಿಧಾನ: 
ತುಪ್ಪವನ್ನು ಬಿಸಿ ಮಾಡಿ . ಅಲ್ಲಿಯವರೆಗೆ ಪಾತ್ರೆಯಲ್ಲಿ ಬೆಸನ್‌‌ ಹಾಕಿ . ಇದರಲ್ಲಿ ತುಪ್ಪ , ಸಕ್ಕರೆಯ ಪುಡಿ ಮತ್ತು ಏಲಕ್ಕಿ ಹಾಕಿ ಮತ್ತು ಇದರಲ್ಲಿ ಒಣ ದ್ರಾಕ್ಷಿ ಹಾಕಿ ಮತ್ತು ನಿಮಗೆ ಬೇಕಾದ ರೀತಿಯಲ್ಲಿ ಲಡ್ಡು ಗೋಲಾಕಾರದಲ್ಲಿ ಸಿದ್ದಪಡಿಸಿ. ಈಗ ಸಿದ್ದವಾಯಿತು ನಿಮ್ಮ ನೆಚ್ಚಿನ ಲಡ್ಡು. 

ವೆಬ್ದುನಿಯಾವನ್ನು ಓದಿ