ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

Krishnaveni K

ಶನಿವಾರ, 13 ಡಿಸೆಂಬರ್ 2025 (11:05 IST)
ಕೋಲ್ಕತ್ತಾ: ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ಅವರನ್ನು ನೋಡಲು ನವ ವಿವಾಹಿತ ಜೋಡಿಯೊಂದು ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡಿದೆ.

GOAT TOUR ಅಂಗವಾಗಿ ಇಂದು ವಿಶ್ವ ವಿಖ್ಯಾತ ತಾರೆ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಕೋಲ್ಕತ್ತಾಗೆ ಬಂದಿಳಿದ ಅವರನ್ನು ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೇ ಫುಟ್ಬಾಲ್ ಆರಾಧಕರು ಸಾಕಷ್ಟು ಸಂಖ್ಯೆಯಲ್ಲಿ ಅವರನ್ನು ನೋಡಲು ಬಂದಿದ್ದು ಹರ್ಷೋದ್ಘಾರ ಮಾಡಿದ್ದಾರೆ.

ಇನ್ನು, ಮೆಸ್ಸಿ ಒಟ್ಟು ನಾಲ್ಕು ನಗರಗಳಿಗೆ ಭೇಟಿ ನೀಡಲಿದ್ದು, ಕೊನೆಯ ದಿನ ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಲಿದ್ದಾರೆ. ಅವರ ಜೊತೆಗೆ ಕೈ ಕುಲುಕಿ, ಸೆಲ್ಫೀ ತೆಗೆಯಲು 10 ಲಕ್ಷ ರೂ.ಗಳ ಟಿಕೆಟ್ ಆಫರ್ ಮಾಡಲಾಗಿದೆ!

ಮೆಸ್ಸಿಗೆ ಭಾರತದಲ್ಲಿ ಎಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂದರೆ ಅವರು ಭಾರತಕ್ಕೆ ಬರುತ್ತಾರೆಂದು ತಿಳಿದು ನವವಿವಾಹಿತ ಜೋಡಿಯೊಂದು ತಮ್ಮ ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡಿದೆಯಂತೆ. ಗಂಡ-ಹೆಂಡತಿ ಇಬ್ಬರೂ ಮೆಸ್ಸಿ ಅಭಿಮಾನಿಗಳಾಗಿದ್ದು, 2010 ರಿಂದಲೂ ಅವರ ಆಟವನ್ನು ವೀಕ್ಷಿಸುತ್ತಿದ್ದಾರೆ. ಇದೀಗ ಮೆಸ್ಸಿ ಭಾರತಕ್ಕೆ ಬರುತ್ತಾರೆಂದು ತಿಳಿದು ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡಿದ್ದು ನಮಗೆ ಮೆಸ್ಸಿ ನೋಡುವುದೇ ತುಂಬಾ ಮುಖ್ಯ ಎಂದು ಈ ಜೋಡಿ ಹೇಳಿಕೊಂಡಿದೆ!

VIDEO | West Bengal: Argentine footballer Lionel Messi arrived at Kolkata Airport accompanied by Luis Suarez and Rodrigo De Paul.

(Source: Third Party)#LionelMessi

(Full video available on PTI Videos – https://t.co/n147TvrpG7) pic.twitter.com/nNVfGvfpnX

— Press Trust of India (@PTI_News) December 12, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ