ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಹಾರ್ದಿಕ್ ಪಾಂಡ್ಯ ಮೆಚ್ಚುಗೆ, Video

Sampriya

ಬುಧವಾರ, 8 ಏಪ್ರಿಲ್ 2026 (14:39 IST)
Photo Credit X
ವೈಭವ್‌ ಸೂರ್ಯವಂಶಿ ಬ್ಯಾಟಿಂಗ್‌ ವೈಖರಿಗೆ ಮುಂಬೈ ಕ್ಯಾಪ್ಟನ್‌ ಹಾರ್ದಿಕ್ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 27ರನ್‌ಗಳಿಂದ ಗೆಲುವು ಸಾಧಿಸಿದೆ. 

ಮಳೆಯಿಂದಾಗಿ 11 ಓವರ್‌ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್ ಸೂರ್ಯವಂಶಿ ಅವರು ಅಬ್ಬರಿಸಿದರು. 

ವೈಭವ್ ಸೂರ್ಯವಂಶಿ 14ಎಸೆತಕ್ಕೆ 39ರನ್ ಗಳಿಸುವ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್‌ನಿಂದ 11 ಓವರ್‌ಗಳಲ್ಲಿ 150ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 27ರನ್‌ಗಳ ಹೀನಾಯ ಸೋಲು ಅನುಭವಿಸಿತು. 

ಪಂದ್ಯಾಟದ ಕೊನೆಯಲ್ಲಿ ಹಸ್ತಲಾಘನದ ವೇಳೆ ಹಾರ್ದಿಕ್ ಪಾಂಡ್ಯ ಅವರು  ವೈಭವ್ ಸೂರ್ಯವಂಶಿ ಪ್ರದರ್ಶನಕ್ಕೆ ಮೆಚ್ಚಿ, ಬೆನ್ನುತಟ್ಟಿ ಹುರಿದುಂಬಿಸಿದರು. ಇದು ಕ್ಯಾಮಾರಾದಲ್ಲಿ ಸೆರೆಯಾಗಿದೆ.  

Vaibhav Sooryavanshi impressed Hardik Pandya ???? ????

Batting esi karo ki ....opposition bhi respect de ???????? pic.twitter.com/XS5hTWSrIX

— Sonu Jaat • Cricket (@TheSonuJaat) April 8, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ