Video: ಚಿನ್ನಸ್ವಾಮಿಯಲ್ಲಿ ಪಂದ್ಯದ ವೇಳೆ 50 ಮೊಬೈಲ್‌ ಮಿಸ್ಸಿಂಗ್‌: ಫೋನ್‌ ಕಳೆದುಕೊಂಡ ಮಹಿಳೆಯಿಂದ ಎಚ್ಚರಿಕೆ

Sampriya

ಮಂಗಳವಾರ, 31 ಮಾರ್ಚ್ 2026 (16:03 IST)
Photo Credit X
ಬೆಂಗಳೂರು: ರಾಜ್ಯದಲ್ಲಿ ಐಪಿಎಲ್‌ ಜ್ವರ ಕಾವೇರುತ್ತಿದೆ. ಅಭಿಮಾನಿಗಳು ಮುಗಿಬಿದ್ದು ಐಪಿಎಲ್‌ ಟಿಕೆಟ್‌ ಪಡೆದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುತ್ತಾರೆ. ಆದರೆ, ಈ ಬಾರಿಯ ಐಪಿಎಲ್‌ ಉದ್ಘಾಟನಾ ಪಂದ್ಯಕ್ಕೆ ಬಂದಿದ್ದ ಹಲವು ಅಭಿಮಾನಿಗಳಿಗೆ ಶಾಕ್‌ ಆಗಿದೆ. 

ಐಪಿಎಲ್‌ ಪಂದ್ಯಗಳನ್ನೂ ಟಾರ್ಗೆಟ್‌ ಮಾಡಿರುವ ಕಳ್ಳರು, ಕ್ರೀಡಾಂಗಣದಲ್ಲಿ ತಮ್ಮ ಕೈಚಳಕ ತೋರಿರುವುದು ಕಂಡುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಶನಿವಾರ ಆರ್‌ಸಿಬಿ ಮತ್ತು ಎಚ್‌ಆರ್‌ಎಚ್‌ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ 50ಕ್ಕೂ ಹೆಚ್ಚು ಮೊಬೈಲ್‌ಗಳ ಕಳ್ಳತನ ನಡೆದಿರುವುದು ಕಂಡುಬಂದಿದೆ. 

ಮೊಬೈಲ್ ಫೋನ್‌ ಕಳ್ಳರು ವ್ಯವಸ್ಥಿತವಾಗಿ ಕೃತ್ಯ ಎಸಗಿದ್ದು, ಈ ಬಗ್ಗೆ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಐಪಿಎಲ್‌ ಪಂದ್ಯ ವೀಕ್ಷಣೆಗೆ ತೆರಳುವವರು ತುಂಬಾ ಎಚ್ಚರದಿಂದ ಇರಬೇಕು. ಯಾಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಎಚ್‌ಆರ್‌ಎಚ್‌ ಪಂದ್ಯದ ವೇಳೆ P3 ಸ್ಟ್ಯಾಂಡ್ ಒಂದರಲ್ಲೇ ನನ್ನ ಗಂಡನ ಫೋನ್‌ ಸೇರಿ 50 ರಿಂದ 60 ಮೊಬೈಲ್‌ಗಳು ಕಳ್ಳತನವಾಗಿವೆ ಎಂದು ಹೇಳಿಕೊಂಡಿದ್ದಾರೆ.

ಪಂದ್ಯದ ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ನನ್ನ ಪತಿ ನೀರು ತರಲು ಹೋದಾಗ ಅವರ ಫೋನ್ ಕಳುವಾಗಿರುವುದು ಗಮನಕ್ಕೆ ಬಂದಿದೆ. ಅವರಂತೆ ಅಲ್ಲಿ ಹತ್ತಾರು ಜನರು ಫೋನ್ ಕಳೆದುಕೊಂಡು ಕಂಗಾಲಾಗಿದ್ದರು. ಈ ಬಗ್ಗೆ ನಾವು ಸ್ಟೇಡಿಯಂನಲ್ಲಿದ್ದ ಪೊಲೀಸರಿಗೆ ತಿಳಿಸಿದಾಗ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಐಪಿಎಲ್‌ ಮ್ಯಾಚ್‌ಗಳಲ್ಲೂ ನಡೆಯುತ್ತಿದೆ. ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಪ್ರೇಕ್ಷಕರು ಆಹಾರ ಮತ್ತು ಪಾನೀಯ ತರಲು ಹೋದಾಗ ಕಳ್ಳರು ಆ ಸಮಯವನ್ನು ಬಳಸಿಕೊಂಡಿದ್ದಾರೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ. 

Beware Cricket fans ⚠️ ????

Listen to this lady and
This shouldn’t go unheard because it’s such an organised crime where so many phone’s were stolen and it’s such a breach of trust & security. She requested Bangalore Police to take strict action against this and get hold of the… pic.twitter.com/MJXrlsaoHd

— Karnataka Portfolio (@karnatakaportf) March 30, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ