Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

Krishnaveni K

ಶನಿವಾರ, 13 ಡಿಸೆಂಬರ್ 2025 (14:41 IST)
Photo Credit: X
ಕೋಲ್ಕತ್ತಾ: ಗೋಟ್ ಇಂಡಿಯಾ ಟೂರ್ ನ ಅಂಗವಾಗಿ ಭಾರತಕ್ಕೆ ಭೇಟಿ ನೀಡಿರುವ ಅರ್ಜೆಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ ನೋಡಲು ಸಿಕ್ಕಿಲ್ಲ ಎಂದು ಪುಂಡ ಯುವಕರು ನಮ್ಮದೇ ದೇಶದ ಸುಸಜ್ಜಿತ ಫುಟ್ಬಾಲ್ ಮೈದಾನವನ್ನೇ ಪುಡಿಗಟ್ಟಿದ್ದಾರೆ.

ಇಂದು ಕೋಲ್ಕಾದ ಸಾಲ್ಟ್ ಲೇಕ್ ಸ್ಟೇಡಿಯಂಗೆ ಬಂದ ಮೆಸ್ಸಿ ತಮ್ಮ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ.  ಈ ವೇಳೆ ಮೈದಾನದಲ್ಲಿ ಮೆಸ್ಸಿಯನ್ನು ನೋಡಬಹುದು ಎಂದು ಸಾಕಷ್ಟು ಜನ ದುಬಾರಿ ಬೆಲೆ ಟಿಕೆಟ್ ಖರೀದಿಸಿ ಬಂದಿದ್ದಾರೆ. ಆದರೆ ಮೆಸ್ಸಿ ಮೈದಾನದಲ್ಲಿ ಕೇವಲ 10 ನಿಮಿಷ ಮಾತ್ರ ಇದ್ದು ತೆರಳಿದ್ದಾರೆ.

ಇದರಿಂದ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಟಿಕೆಟ್ ದರ ಕನಿಷ್ಠ 5,000 ರೂಗಳಾಗಿತ್ತು. ಇಷ್ಟು ದುಬಾರಿ ಟಿಕೆಟ್ ದರ ನೀಡಿ ಒಳಗೆ ಬಂದರೆ ಮೆಸ್ಸಿಯನ್ನು ಸರಿಯಾಗಿ ನೋಡಲೂ ಅವಕಾಶ ಸಿಗಲಿಲ್ಲ ಎಂದು ಸಿಟ್ಟಗೆದ್ದ ಯುವಕರು ಮೈದಾನದಲ್ಲಿದ್ದ ಕುರ್ಚಿ, ಪೋಸ್ಟ್ ಗಳನ್ನು ಕಿತ್ತು ಹಾಕಿ ಮೈದಾನಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ.

ನಮ್ಮ ದೇಶದ ತಾರೆಯರು ಫುಟ್ಬಾಲ್ ನೋಡುವಾಗ 100 ರೂ. ಟಿಕೆಟ್ ದರ ಕೊಟ್ಟು ಮೈದಾನಕ್ಕೆ ಬರಲೂ ಹಿಂದೆ ಮುಂದೆ ನೋಡುತ್ತಾರೆ. ಅಂತಹದ್ದರಲ್ಲಿ ವಿದೇಶೀ ತಾರೆ ಬಂದಾಗ ಸಾವಿರಾರು ರೂಪಾಯಿ ಕೊಟ್ಟು ಬಂದಿದ್ದೂ ಅಲ್ಲದೆ, ನೋಡಲು ಸಿಗಲಿಲ್ಲ ಎಂದು ನಮ್ಮದೇ ದೇಶದ ಸುಸಜ್ಜಿತ ಕ್ರೀಡಾಂಗಣವನ್ನು ಹಾಳುಗೆಡವಿದ್ದು ದುರಂತ.

One who suffered most here is the Indian Football Infrastructure - Iconic Salt Lake Stadium ????️

????????????pic.twitter.com/nfzCm87lhe

— The Khel India (@TheKhelIndia) December 13, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ