ನನಗೆ ಚಿನ್ನದ ಪದಕ ಸಿಗದಿದ್ದರೆ ಬರಿಗೈಲಿ ವಾಪಸಾಗುವೆ: ವಿಕಾಸ್ ಆತ್ಮವಿಶ್ವಾಸ

ಶನಿವಾರ, 13 ಆಗಸ್ಟ್ 2016 (21:46 IST)
ಪ್ರೀ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಸಮಗ್ರ ಜಯ ಸಾಧಿಸಿ ಒಲಿಂಪಿಕ್ ಪದಕಕ್ಕೆ ಕೇವಲ ಒಂದು ಗೆಲುವು ಬೇಕಾಗಿರುವ ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ರಿಯೊ ಕ್ರೀಡಾಕೂಟದಲ್ಲಿ ತಮಗೆ ಚಿನ್ನಕ್ಕಿಂತ ಕಡಿಮೆಯಾದದ್ದು ಬೇಡವೆಂದು ಹೇಳಿದ್ದಾರೆ.

ಪುರುಷರ 75 ಕೆಜಿ ಮಿಡಲ್‌ವೇಟ್ ವಿಭಾಗದಲ್ಲಿ ಟರ್ಕಿಯ ಒಂಡರ್ ಸೈಪಾಲ್ ಅವರ ವಿರುದ್ಧ 3-0 ಸರ್ವಾನುಮತದ ನಿರ್ಣಯದಿಂದ ವಿಕಾಸ್ ಜಯಗಳಿಸಿದ್ದರು.  ನಾಲ್ಕು ವರ್ಷ ಕಿರಿಯನಾಗಿರುವ ಉಜ್ಬೆಕ್ ಬೆಕ್ಟೆಮಿರ್ ಮೆಲಿಕುಜೇವ್ ತಮಗೆ ಚಿನ್ನದ ಪದಕದ ದಾರಿಯಲ್ಲಿ ಅಡ್ಡ ನಿಂತಿದ್ದಾರೆಂದು ವಿಕಾಸ್ ಹೇಳಿದರು. 
 
 ಅವರು ಗ್ರೂಪ್‌ನಲ್ಲಿ ಅತೀ ಕಠಿಣ ಫೈಟರ್. ನಾನು ಮಾತ್ರ ಬೆಳ್ಳಿ ಅಥವಾ ಕಂಚು ತೆಗೆದುಕೊಳ್ಳುವುದಿಲ್ಲ. ಚಿನ್ನದ ಪದಕ ಅಥವಾ ಬರಿಗೈಲಿ ವಾಪಸಾಗುವುದಾಗಿ ವಿಕಾಸ್ ಹೇಳಿದರು. ಮೆಲಿಕುಜೆವ್ ವಿಕಾಸ್ ಅವರನ್ನು ಕಳೆದ ವರ್ಷ ಏಷ್ಯಾ ಚಾಂಪಿಯನ್ ಷಿಪ್‌ನಲ್ಲಿ ಸೋಲಿಸಿದ್ದರು. 
 
 ಆದರೆ ಕಳೆದ ವರ್ಷಕ್ಕಿಂತ ನನ್ನ ಫಾರಂ ಉತ್ತಮವಾಗಿದ್ದು, ಉಜ್ಬೆಕ್ ಅವರನ್ನು ನಿವಾರಿಸುವ ಆತ್ಮವಿಶ್ವಾಸವನ್ನು ವಿಕಾಸ್ ತೋರಿಸಿದರು.

ವೆಬ್ದುನಿಯಾವನ್ನು ಓದಿ