ಯೋಗೀಶ್ವರ್‌ಗೆ ಚಿನ್ನದ ಯೋಗವಿಲ್ಲ

ಬುಧವಾರ, 7 ಸೆಪ್ಟಂಬರ್ 2016 (10:23 IST)
ಲಂಡನ್ ಓಲಂಪಿಕ್ಸ್‌ನಲ್ಲಿ ಯೋಗೀಶ್ವರ್ ಗೆದ್ದಿದ್ದ ಕಂಚಿನ ಪದಕ ಚಿನ್ನಕ್ಕೆ ಬಡ್ತಿ ಹೊಂದುವುದಿಲ್ಲ ಎಂದು ಯುನೈಟೆಡ್ ವಿಶ್ವ ಕುಸ್ತಿ ಸ್ಪಷ್ಟ ಪಡಿಸಿದೆ. 


 
2012ರ ಓಲಂಪಿಕ್ಸ್‌ನಲ್ಲಿ ಕುಸ್ತಿ ಪಂದ್ಯದಲ್ಲಿ (60 ಕೆಜಿ. ಫ್ರಿಸ್ಟೈಲ್‌) ಮೊದಲ ಸ್ಥಾನ ಗಳಿಸಿದ್ದ ಅಜರ್‌ಬೈಜಾನ್‌ನ ತೊಗರುಲ್ ಅಸ್ಗರೊವ್ ಸಹ ನಿಷೇಧಿತ ಮದ್ದು ಸೇವಿಸಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈ ಸುದ್ದಿಯನ್ನು ತಳ್ಳಿ ಹಾಕಿರುವ ಯುನೈಟೆಟ್ ವಿಶ್ವ ಕುಸ್ತಿ  ತೊಗರುಲ್ ಉದ್ದೀಪನ ಸೇವಿಸಿಲ್ಲ ಎಂಬುದು ಪರೀಕ್ಷೆಯಿಂದ ಸಾಬೀತಾಗಿದೆ. ಹೀಗಾಗಿ ಅವರ ಚಿನ್ನ ಅಬಾಧಿತ ಎಂದು ಹೇಳಿದೆ. 
 
ಇದೇ ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದಿದ್ದ ಬೆಸಿಕ್ ಕುದುಕೊವ್ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿತ್ತು. ಹೀಗಾಗಿ ಆ ಪದಕವನ್ನು ಯೋಗೇಶ್ವರ್ ಅವರಿಗೆ ಹಸ್ತಾಂತರಿಸುವ ಬಗ್ಗೆ ವರದಿ ಬಂದಿತ್ತು. ಆದರೆ ಮೃತ ಕುದುಕೊವ್ ಅವರ ಗೌರವಾರ್ಥ ಯೋಗೇಶ್ವರ್ ನಯವಾಗಿ ಬೆಳ್ಳಿ ಪದಕವನ್ನು ತಳ್ಳಿ ಹಾಕಿದ್ದರು. 
 
ಬಳಿಕ ತೊಗರುಲ್ ಅಸ್ಗರೊವ್  ಸಹ ಉದ್ದೀಪನ ಸೇವಿಸಿದ್ದಾರೆ. ಹೀಗಾಗಿ ಅವರು ಗೆದ್ದಿದ್ದ ಚಿನ್ನದ ಪದಕ ಯೋಗೀಶ್ವರ್ ಅವರಿಗೆ ಹಸ್ತಾಂತರವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ