ಬ್ಯಾಡ್ಮಿಂಟನ್‌ನಲ್ಲಿ ಕಿದಂಬಿ ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ

ಸೋಮವಾರ, 15 ಆಗಸ್ಟ್ 2016 (19:36 IST)
ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಕಿದಂಬಿ ಶ್ರೀಕಾಂತ್ ರಿಯೊ ಒಲಿಂಪಿಕ್ಸ್‌ನಲ್ಲಿ  ಪದಕದ ಆಸೆಯನ್ನು ಜೀವಂತವಿರಿಸಿದ್ದು, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಡೆನ್ಮಾರ್ಕ್‌ನ ಜಾರ್ಗನ್‌ಸನ್ ಅವರನ್ನು 21-19, 21-19 ನೇರ ಸೆಟ್‌ಗಳಿಂದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಸೋಲಿಸಿದರು.

ಸಾನಿಯಾ ಮಿರ್ಜಾ ಆಘಾತಕಾರಿ ಸೋಲಿನ ಬಳಿಕ ಕಿದಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧು ಅವರ ಮೇಲೆ ಪದಕದ ಆಸೆ ಜೀವಂತವಿರಿಸಲಾಗಿದ್ದು, ಶ್ರೀಕಾಂತ್ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಮಾಂಚಕಾರಿ ಜಯಗಳಿಸಿದರು.

ಶ್ರೀಕಾಂತ್ ರಿಯೊದಲ್ಲಿ ಉತ್ತಮ ಟಚ್‌ನಲ್ಲಿದ್ದು, ಮೂರನೇ ಸೀಡ್ ಮತ್ತು ಹಾಲಿ ಚಾಂಪಿಯನ್ ಲಿನ್ ಡ್ಯಾನ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ  ಎದುರಿಸಲಿದ್ದಾರೆ. 16ನೇ ಸುತ್ತಿನಲ್ಲಿ ಲಿನ್ ಡಾನ್ ಅವರಿಗೆ ಬೈ ಸಿಕ್ಕಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ