ಸುಶೀಲ್ ಕುಮಾರ್‌ಗೆ ಪದ್ಮವಿಭೂಷಣಕ್ಕೆ ಶಿಫಾರಸು

ಬುಧವಾರ, 7 ಸೆಪ್ಟಂಬರ್ 2016 (12:19 IST)
ಒಲಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ದೇಶದ ಮೂರನೇ ಅತಿ ಶ್ರೇಷ್ಠ ಗೌರವವಾದ ಪದ್ಮವಿಭೂಷಣಕ್ಕೆ ಶಿಫಾರಸು ಮಾಡಿದೆ. 

ಮಹಿಳಾ ಕುಸ್ತಿ ಪಟು ಅಲ್ಕಾ ತೋಮರ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಯಶ್ವಿರ್ ಸಿಂಗ್( ಸುಶೀಲ್ ಕೋಚ್) ಅವರ ಹೆಸರನ್ನು ಸಹ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಡಬ್ಲ್ಯುಎಫ್ಐ ತಿಳಿಸಿದೆ. 
 
ಕಳೆದ ತಿಂಗಳ ಆರಂಭದಲ್ಲೇ ಮೂವರ ಹೆಸರನ್ನು ಮೂರನೆಯ ಅತ್ಯುನ್ನತ ನಾಗರಿಕ ಗೌರವಕ್ಕೆ ಶಿಫಾರಸು ಮಾಡಲಾಗಿದೆ ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸಹ ಸುಶೀಲ್ ಹೆಸರನ್ನು ಪಜ್ಮವಿಭೂಷಣಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಅದು ತಿರಸ್ಕೃತವಾಗಿತ್ತು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ಎರಡು ಒಲಂಪಿಕ್ಸ್‌ಗಳಲ್ಲಿ ವೈಯಕ್ತಿಕ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎನ್ನಿಸಿಕೊಂಡಿದ್ದಾರೆ ಸುಶೀಲ್. 2008ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಕಂಚನ್ನು ಸಂಪಾದಿಸಿದ್ದ ಅವರು 2012ರ ಲಂಡನ್ ಒಲಂಪಿಕ್ಸ್‌ನಲ್ಲಿ ರಜತವನ್ನು ಗೆದ್ದಿದ್ದರು. 
 
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಎರಡು ಬಾರಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ, ನಾಲ್ಕು ಬಾರಿ ಕಾಮನ್‌ವೆಲ್ತ್ ಚಾಂಪಿಯನ್ ಆಗಿರುವ ಅವರು ಈಗಾಗಲೇ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ 'ಖೇಲ್ ರತ್ನ‌' ಗೌರವಕ್ಕೆ ಪಾತ್ರರಾಗಿದ್ದಾರೆ. 

ದುರದೃಷ್ಟವಶಾತ್ ಈ ಬಾರಿಯ ರಿಯೋ ಒಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಅವರಿಗೆ ಲಭ್ಯವಾಗಲಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ