ನರಸಿಂಗ್ ಯಾದವ್ ಜತೆ ತಮ್ಮ ನಿವಾಸದಲ್ಲಿ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನ್ನಾಡುತ್ತಿದ್ದ ಯಾದವ್, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ಮೂಲಕವಾದರೂ ಸತ್ಯ ಹೊರಬೀಳಬಹುದು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವುದು ಭವಿಷ್ಯದಲ್ಲಿ ಕ್ರೀಡಾಪಟುಗಳ ಜತೆ ಇದೇ ರೀತಿಯ ಘಟನೆಗಳು ಎದುರಾಗುವ ಸಾಧ್ಯತೆಯನ್ನು ದೂರ ಮಾಡಬಹುದು ಎಂದು ಹೇಳಿದ್ದಾರೆ.