ಗ್ರಹಣ ಮುಗಿದ ಬಳಿಕ ಸ್ನಾನ ಮಾಡುವಾಗ ಹೀಗೆ ಮಾಡಿದರೆ ಗ್ರಹಣ ದೋಷ ನಿವಾರಣೆಯಾಗುತ್ತದೆ

ಗುರುವಾರ, 26 ಡಿಸೆಂಬರ್ 2019 (07:02 IST)
ಬೆಂಗಳೂರು : ಇಂದು ಕೇತುಗ್ರಸ್ತ ಕಂಕಣ ಸೂರ್ಯಗ್ರಹಣವಿರುವುದರಿಂದ ಅದು ಮುಗಿದ ಬಳಿಕ ಸ್ನಾನ ಮಾಡುವಾಗ ಈ ಒಂದು ಮಂತ್ರವನ್ನು ಪಠಿಸಿದರೆ ಸೂರ್ಯಗ್ರಹಣದಿಂದ ನಿಮ್ಮ ಮೇಲೆ ಆದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.


ಇಂದು ಸೂರ್ಯ ಗ್ರಹಣ 8.15 ಶುರುವಾಗಿ 10.55ಕ್ಕೆ  ಮುಕ್ತಾಯವಾಗುತ್ತದೆ. ಈ ಗ್ರಹಣದ ಮುಗಿದ ಬಳಿಕ ಎಲ್ಲರೂ ಉಟ್ಟಬಟ್ಟೆಯಲ್ಲಿಯೇ ಸ್ನಾನ ಮಾಡಿ . ಸ್ನಾನ ಮಾಡುವಾಗ ಸೂರ್ಯ ಮತ್ತು ನವಗ್ರಹಗಳ ಸಂಕಲ್ಪ ಮಾಡುತ್ತಾ “ಓಂ ಭಾಸ್ಕರಾಯ ವಿದ್ಮಹೇ, ದಿವಾಕರಾಯ ಧೀಮಹಿ, ತನ್ನೋ ಸೂರ್ಯ ಪ್ರಚೋದಯಾತ್ “ ಎಂಬ ಶ್ರೀ ಸೂರ್ಯಗಾಯತ್ರಿ ಮಂತ್ರವನ್ನು 3 ಬಾರಿ ಹೇಳಬೇಕು.

 

ಸ್ನಾನ ಮುಗಿದ ಬಳಿಕ ಮಡಿಬಟ್ಟೆ ಉಟ್ಟು ದೇವರ ಮುಂದೆ ತುಪ್ಪದ ದೀಪ ಹಚ್ಚಬೇಕು. ಬಳಿಕ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಬೇಕು. ಹೀಗೆ ಮಾಡಿದರೆ  ಸೂರ್ಯದೇವನ ಅನುಗ್ರಹ ನಿಮ್ಮ ಮೇಲಾಗುತ್ತದೆ. ಮತ್ತು ಗ್ರಹಣದ ಪ್ರಭಾವ ನಿಮ್ಮ ರಾಶಿ, ಜೀವನದ  ಮೇಲೆ ಆಗುವುದಿಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ