ಪರ್ಮನೆಂಟ್ ಆಗಿ ಹೇರ್ ಸ್ಟ್ರೈಟನರ್ ಬಳಸುವವರು ಇದನ್ನು ತಪ್ಪದೇ ಗಮನಿಸಿ

Krishnaveni K

ಶುಕ್ರವಾರ, 1 ಮಾರ್ಚ್ 2024 (11:43 IST)
ಬೆಂಗಳೂರು: ಗುಂಗುರು ಕೂದಲು ಇದೆ, ಕೂದಲು ಸೊಟ್ಟಗಿದೆ ಎಂಬ ಕಾರಣಕ್ಕೆ ಸ್ಟ್ರೈಟನರ್ ಬಳಸುವವರು ಈ ಕೆಲವೊಂದು ಅಂಶವನ್ನು ತಪ್ಪದೇ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಹೇರ್ ಸ್ಟ್ರೈಟನರ್ ಮಾಡಿಸುವುದರ ಅಡ್ಡಪರಿಣಾಮಗಳೇನು ತಿಳಿದುಕೊಳ್ಳಿ.

ಬ್ಯೂಟಿ ಪಾರ್ಲರ್ ಅಥವಾ ಬ್ಯುಟಿಶೀಯನ್ ಬಳಿ ಹೋದಾಗ ಕೂದಲು ನೇರವಾಗಿಸಲು ಒಂದು ರೀತಿಯ ಕೆಮಿಕಲ್ ಯುಕ್ತ ಕ್ರೀಂ ಬಳಸುತ್ತಾರೆ. ಇದು ಮಹಿಳೆಯರಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ಹೇರ್ ಸ್ಟ್ರೈಟನಿಂಗ್ ಕ್ರೀಂಗಳಲ್ಲಿ ಒಂದು ರೀತಿಯ ಕೆಮಿಕಲ್ ಇದ್ದೇ ಇರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಹೇರ್ ಸ್ಟ್ರೈಟನರ್ ಗೆ ಬಳಸುವ ಕೆಮಿಕಲ್ ನಿಂದ ಗರ್ಭಕೋಶದ ಕ್ಯಾನ್ಸರ್ ಅಥವಾ ಸ್ತನ ಕ್ಯಾನ್ಸರ್ ನ ಅಪಾಯವಿದೆ ಎನ್ನಲಾಗುತ್ತದೆ.

ಗುಂಗುರು ಕೂದಲು ಇರುವವರು ಸಾಮಾನ್ಯವಾಗಿ ಕೂದಲು ನೇರವಾಗಿಸಲು ಸ್ಟ್ರೈಟನಿಂಗ್ ಪ್ರಕ್ರಿಯೆಯ ಮೊರೆ ಹೋಗುತ್ತಾರೆ. ಈ ರೀತಿ ಕೆಮಿಕಲ್ ಬಳಸಿದಾಗ ಕೂದಲು ಒಂದು ರೀತಿಯಲ್ಲಿ ಡ್ರೈ ಆಗುತ್ತದೆ. ಇದರಿಂದ ಕೂದಲು ಉದುರುವಿಕೆ ಸಮಸ್ಯೆಯೂ ಎದುರಾಗಬಹುದು.

ರಾಸಾಯನಿಕಗಳ ಬಳಕೆಯಿಂದ ತಲೆಹೊಟ್ಟು ಉಂಟಾಗಬಹುದು. ಇದರಿಂದ ತಲೆಯಲ್ಲಿ ನವೆ, ಕೂದಲು ಸೀಳುವಿಕೆ ಇತ್ಯಾದಿ ಸಮಸ್ಯೆ ಬರುವ ಸಾಧ‍್ಯತೆಯಿದೆ. ಅನಿವಾರ್ಯವಾಗಿ ಹೇರ್ ಸ್ಟ್ರೈಟನರ್ ಬಳಸಿದರೆ ತಕ್ಷಣವೇ ಮೆಂತ್ಯ ಬಳಸಿ ತಲೆ ಕೂದಲು ತೊಳೆದುಕೊಳ್ಳಿ. ಇದು ಕೂದಲು ಉದುರುವಿಕೆ ತಡೆಯುತ್ತದಲ್ಲದೆ, ಕೂದಲುಗಳ ಆರೋಗ್ಯ ಕಾಪಾಡುತ್ತದೆ. ಹೀಗಾಗಿ  ಅನಿವಾರ್ಯವಿದ್ದರೆ ಮಾತ್ರ ಸ್ಟ್ರೈಟನರ್ ಮಾಡಿ. ಇಲ್ಲದೇ ಹೋದರೆ ನಿಮ್ಮ ಕೂದಲು ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ