ಐಪಿಎಲ್ ಆರಂಭಕ್ಕೆ ಬಿಸಿಸಿಐಗೆ ಮತ್ತಷ್ಟು ಬಲ

ಸೋಮವಾರ, 1 ಜೂನ್ 2020 (09:26 IST)
ನವದೆಹಲಿ: ಕೇಂದ್ರ ಸರ್ಕಾರ ಲಾಕ್ ಡೌನ್ 5 ರಲ್ಲಿ ಸಾಕಷ್ಟು ಸಡಿಲಿಕೆ ಮಾಡಿದ್ದು, ಜಿಮ್, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಇದರಿಂದಾಗಿ ಬಿಸಿಸಿಐಗೆ ಐಪಿಎಲ್ ಆಯೋಜಿಸಲು ಮತ್ತಷ್ಟು ಬಲ ಬಂದಂತಾಗಿದೆ.

 

ಟಿ20 ವಿಶ್ವಕಪ್ ಕ್ರಿಕೆಟ್ ಮುಂದೂಡಿಕೆಯಾದರೆ ಅಕ್ಟೋಬರ್ ನಲ್ಲಾದರೂ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆಸಿದೆ. ಆದರೆ ಜಿಮ್ ತೆರೆಯಲು ಅನುಮತಿ ಸಿಕ್ಕಿರಲಿಲ್ಲ. ಅಲ್ಲದೆ, ಕ್ರೀಡಾಂಗಣ ತೆರೆಯಲೂ ನಿರ್ಬಂಧಗಳಿತ್ತು. ಹೀಗಾಗಿ ಪೂರ್ವ ತಯಾರಿ ನಡೆಸುವುದೇ ಬಿಸಿಸಿಐಗೆ ಚಿಂತೆಯಾಗಿತ್ತು.

ಈಗ ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸುವುದಾದರೂ ಪೂರ್ವ ತಯಾರಿಗೆ ಇದ್ದಿದ್ದ ಅಡ್ಡಿಗಳೆಲ್ಲಾ ನಿವಾರಣೆಯಾಗಿದೆ. ಹೀಗಾಗಿ ಬಿಸಿಸಿಐ ಈ ವರ್ಷದ ಐಪಿಎಲ್ ಆಯೋಜಿಸುವ ಭರವಸೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ