ಮಹಿಳಾ ಟಿ20 ವಿಶ್ವಕಪ್: ಭಾರತೀಯ ಮಹಿಳೆಯರ ಸಾಧಾರಣ ಮೊತ್ತ

ಗುರುವಾರ, 27 ಫೆಬ್ರವರಿ 2020 (10:49 IST)
ಮೆಲ್ಬೋರ್ನ್: ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಮಹಿಳೆಯರು ಎದುರಾಳಿಗೆ ಗೆಲ್ಲಲು 134 ರನ್ ಗಳ ಗುರಿ ನೀಡಿದ್ದಾರೆ.


ಟಾಸ್ ಗೆದ್ದು ಭಾರತಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ನೀಡಿದ ನ್ಯೂಜಿಲೆಂಡ್ ಮಹಿಳೆಯರು ಸ್ಮೃತಿ ಮಂಧನಾರನ್ನು ಕೇವಲ 11 ರನ್ ಗೆ ಔಟ್ ಮಾಡಿ ಮೇಲುಗೈ ಸಾಧಿಸಿದರು. ತಾನಿಯಾ ಭಾಟಿಯಾ 23 ರನ್ ಗಳಿಗೆ ಔಟಾದರು. ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡರೂ ಎದೆಗುಂದದ ಭಾರತೀಯ ಮಹಿಳೆಯರು ರನ್ ಸರಾಸರಿ ಉತ್ತಮವಾಗಿ ಕಾಯ್ದುಕೊಂಡರು.

ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಕುಸಿತ ಕಂಡ ಕಾರಣ ಭಾರತೀಯ ಮಹಿಳೆಯರಿಗೆ ನಿರೀಕ್ಷಿಸಿದ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. 46 ರನ್ ಗಳಿಸಿದ ಶಿಫಾಲಿ ವರ್ಮ್ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ ಉಳಿದವರಿಂದ ಒಂದಂಕಿಯ ರನ್ ಬಂದಿದೆಯಷ್ಟೇ. ಇಂದಿನ ಪಂದ್ಯ ಗೆದ್ದರೆ  ಹರ್ಮನ್ ಪ್ರೀತ್ ಪಡೆ ನಾಕೌಟ್ ಹಂತ ತಲುಪಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ