ಸೋತ ಟೀಂ ಇಂಡಿಯಾಕ್ಕೆ ಗಾಯದ ಮೇಲೆ ಬರೆ ಎಳೆಯುವ ಸುದ್ದಿ!

ಗುರುವಾರ, 27 ಫೆಬ್ರವರಿ 2020 (10:08 IST)
ಕ್ರಿಸ್ಟ್ ಚರ್ಚ್:  ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಮೊದಲ ಟೆಸ್ಟ್ ಸೋತು ದ್ವಿತೀಯ ಟೆಸ್ಟ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದರ ನಡುವೆ ಶಾಕಿಂಗ್ ಸುದ್ದಿ ಬಂದಿದೆ.


ಈಗಾಗಲೇ ರೋಹಿತ್ ಶರ್ಮಾ ಗಾಯಗೊಂಡಿರುವುದರಿಂದ ತಂಡದ ಬ್ಯಾಟಿಂಗ್ ತೀರಾ ಕಳಪೆಯಾಗಿದ್ದು, ಅವರ ಸ್ಥಾನದಲ್ಲಿ ಮೊದಲ ಟೆಸ್ಟ್ ಆಡಿದ್ದ ಪೃಥ್ವಿ ಶಾ ಕೂಡಾ ಗಾಯಗೊಂಡಿರುವ ಸುದ್ದಿ ಬಂದಿದೆ.

ಗಾಯದ ಕಾರಣದಿಂದಾಗಿ ಪೃಥ್ವಿ ನೆಟ್ ಪ್ರಾಕ್ಟೀಸ್ ತಪ್ಪಿಸಿಕೊಂಡಿದ್ದು ಅವರ ಸ್ಥಾನದಲ್ಲಿ ಶನಿವಾರದಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶಬ್ನಂ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ