2022 ರ ಐಪಿಎಲ್ ಗೆ ಎರಡು ಹೊಸ ತಂಡಗಳ ಸೇರ್ಪಡೆ

ಶುಕ್ರವಾರ, 25 ಡಿಸೆಂಬರ್ 2020 (10:05 IST)
ಮುಂಬೈ: 2022 ರ ಐಪಿಎಲ್ ಗೆ ಎರಡು ಹೊಸ ತಂಡಗಳ ಸೇರ್ಪಡೆಯಾಗಲಿದೆ ಎಂದು ಬಿಸಿಸಿಐ ವಾರ್ಷಿಕ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.


ಎಲ್ಲಾ ಸರಿ ಹೋಗಿದ್ದರೆ 2021 ರ ಐಪಿಎಲ್ ನಲ್ಲೇ ಎರಡು ಹೊಸ ತಂಡಗಳ ಸೇರ್ಪಡೆ ಮಾಡುವ ಉದ್ದೇಶ ಬಿಸಿಸಿಐಗಿತ್ತು. ಆದರೆ ಅದಕ್ಕೆ ಸಮಯದ ಅಭಾವವಿರುವ ಕಾರಣ, 2022 ರ ಐಪಿಎಲ್ ಗೆ ಹೊಸ ತಂಡಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಇದರಿಂದಾಗಿ 2022 ರ ಐಪಿಎಲ್ ಗೆ ತಂಡದ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. ಆ ಹೊಸ ತಂಡಗಳು ಯಾವುವು ಎಂದು ಸದ್ಯ ಘೋಷಣೆಯಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ