ಪಾಕ್ ಕ್ರಿಕೆಟಿಗ ಬಾಬರ್ ಅಝಮ್ ಗೆ ವಿರಾಟ್ ಕೊಹ್ಲಿಯನ್ನು ಮೀರಿಸುವ ಶಕ್ತಿಯಿದೆ: ಪಾಕ್ ಕಾಮೆಂಟೇಟರ್

ಸೋಮವಾರ, 13 ಏಪ್ರಿಲ್ 2020 (10:54 IST)
ಇಸ್ಲಾಮಾಬಾದ್: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್ ಮನ್ ಬಾಬರ್ ಅಝಮ್ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಯನ್ನೂ ಮೀರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪಾಕ್ ಕಾಮೆಂಟೇಟರ್ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.


‘ಬಾಬರ್ ಅಝಮ್ ಗೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಕ್ಕಿಲ್ಲ. ಒಂದು ವೇಳೆ ಅವರಿಗೆ ಸಿಕ್ಕಿದ್ದರೆ ಕೊಹ್ಲಿಯನ್ನೂ ಮೀರಿಸುತ್ತಿದ್ದರು. ಆ ಸಾಮರ್ಥ್ಯ ಅವರಿಗಿದೆ’ ಎಂದು ರಮೀಜ್ ಹೇಳಿದ್ದಾರೆ.

ಬಾಬರ್ ಅಝಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತದೆ. ಆದರೆ ಬಾಬರ್ ಕೊಹ್ಲಿ ನನಗೆ ರೋಲ್ ಮಾಡೆಲ್. ಅವರಿಗೆ ನನ್ನನ್ನು ಹೋಲಿಸಬೇಡಿ ಎಂದು ಹಲವು ಬಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ