ವಿದೇಶೀ ಲೀಗ್ ನಲ್ಲಿ ಆಡಲು ಅವಕಾಶ ಕೊಡದ ಬಿಸಿಸಿಐ ವಿರುದ್ಧ ರಾಬಿನ್ ಉತ್ತಪ್ಪ ಅಸಮಾಧಾನ

ಶುಕ್ರವಾರ, 22 ಮೇ 2020 (10:40 IST)
ಮುಂಬೈ: ಪ್ರಸಕ್ತ ಬಿಸಿಸಿಐ ತನ್ನ ದೇಶದ ಕ್ರಿಕೆಟಿಗರಿಗೆ ವಿದೇಶೀ ಕ್ರಿಕೆಟ್ ಲೀಗ್ ಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ. ಈ ನಿಯಮದಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಹೊರದೇಶದ ಕ್ರಿಕೆಟ್ ಲೀಗ್ ಗಳಲ್ಲಿ ಭಾಗವಹಿಸಲು ಸಾಧ‍್ಯವಾಗುತ್ತಿಲ್ಲ.


ಈ ನಿಯಮದ ಬಗ್ಗೆ ಇದೀಗ ಕರ್ನಾಟಕ ಮಾಜಿ ರಣಜಿ ಆಟಗಾರ ರಾಬಿನ್ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಹೊರದೇಶದ ಲೀಗ್ ಗಳಲ್ಲಿ ಭಾಗವಹಿಸಲು ಅವಕಾಶ ನೀಡದೇ ಇರುವುದು ನೋವು ತಂದಿದೆ ಎಂದು ಉತ್ತಪ್ಪ ಹೇಳಿಕೊಂಡಿದ್ದಾರೆ.

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಬಿಸಿಸಿಐನ ಈ ನಿಯಮದ ವಿರುದ್ಧ ಉತ್ತಪ್ಪ ಅಸಮಾಧಾನ ಹೊರಹಾಕಿದ್ದಾರೆ. ‘ದಯವಿಟ್ಟು ನಮ್ಮನ್ನು ಹೋಗಲು ಬಿಡಿ. ಇದು ನಮಗೆ ನೋವು ತರುತ್ತಿದೆ. ಹೊರಗೆ ಹೋಗಿ ಆಡುವುದರಿಂದ ಕ್ರೀಡೆಯ ವಿದ್ಯಾರ್ಥಿಯಾಗಿ ನಮಗೆ ಕಲಿಯಲು ಹಲವು ಅವಕಾಶ ಸಿಗುತ್ತದೆ’ ಎಂದು ಉತ್ತಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ