ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

Krishnaveni K

ಮಂಗಳವಾರ, 30 ಏಪ್ರಿಲ್ 2024 (12:53 IST)
WD
ಬೆಂಗಳೂರು: ಇನ್ನೇನು ಮಾವಿನ ಹಣ್ಣಿನ ಸೀಸನ್ ಬಂದೇ ಬಿಟ್ಟಿತು. ಮಾರುಕಟ್ಟೆಯಲ್ಲಿ ಈಗಾಗಲೇ ಥರ ಥರದ ಮಾವಿನ ಹಣ್ಣು ಸಿಗುತ್ತಿದೆ. ಮಾವಿನ ಹಣ್ಣು ಮನೆಗೆ ತಂದು ತಿನ್ನುವ ಮೊದಲು ಕೆಲವೊಂದು ಎಚ್ಚರಿಕೆ ವಹಿಸಲೇಬೇಕು.

ಮಾರುಕಟ್ಟೆಗಳಲ್ಲಿ ಸಿಗುವ ಥರ ಥರದ ಮಾವಿನ ಹಣ್ಣು ಬಾಯಿಗೆ ಏನೋ ರುಚಿ ಕೊಡುತ್ತದೆ. ಆದರೆ ಆ ಮಾವಿನ ಹಣ್ಣು ಹಾಳಾಗದಂತೆ ದಿನಗಟ್ಟಲೆ ಸಂರಕ್ಷಿಸಿಡಲು ಮತ್ತು ಬೇಗನೇ ಹಣ್ಣಾಗಲು ಅದಕ್ಕೆ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಮಾವಿನ ಹಣ್ಣಿನ ಹೊರ ಭಾಗದಲ್ಲಿ ಬಿಳಿಯ ಆವರಣ ಕಂಡುಬಂದರೆ ಅದಕ್ಕೆ ರಾಸಾಯನಿಕ ಬೆರೆಸಿದ್ದಾರೆ ಎಂಬುದು ಪಕ್ಕಾ ಆಗಿರುತ್ತದೆ.

ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಸಾಕಷ್ಟಿದ್ದು, ಅದು ದೇಹ ತೂಕೆ ಇಳಿಕೆಗೂ ಒಳ್ಳೆಯದು. ಅಲ್ಲದೆ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಬರುವ ಚರ್ಮದ ದದ್ದುಗಳು, ಮೊಡವೆ, ವಾಕರಿಕೆ ಇತ್ಯಾದಿ ಸಮಸ್ಯೆಗಳಿಗೆ ಮಾವಿನ ಹಣ್ಣು ಸೇವಿಸುವುದರಿಂದ ಪರಿಹಾರ ಸಿಗುತ್ತದೆ.

ಆದರೆ ಮಾವಿನ ಹಣ್ಣನ್ನು ರಾಸಾಯನಿಕ ಮುಕ್ತ ಗೊಳಿಸಲು ಸೇವಿಸಬೇಕೆಂದರೆ ಮಾರುಕಟ್ಟೆಯಿಂದ ತಂದ ತಕ್ಷಣ ಸುಮಾರು ಒಂದು ಗಂಟೆ ಕಾಲ ಉಪ್ಪು ಹಾಕಿದ ನೀರಿನಲ್ಲಿ ಮುಳುಗಿಸಿಡಿ. ಬಳಿಕವಷ್ಟೇ ಸೇವಿಸಿ. ರಾಸಾನಿಯಕ ಸಿಂಪಡಿಸಿದ ಮಾವಿನ ಹಣ್ಣು ಸೇವಿಸುವಾಗ ಯಾವಾಗಲೂ ಸಿಪ್ಪೆ ತೆಗೆದೇ ಸೇವನೆ ಮಾಡಿದರೆ ಉತ್ತಮ. ಮಾವಿನ ಹಣ್ಣನ್ನು ನೀರಿನಲ್ಲಿ ಹಾಕಿದ ತಕ್ಷಣ ಅದು ಮುಳುಗಿದರೆ ನೈಸರ್ಗಿಕವಾಗಿ ಹಣ್ಣಾಗಿರುವುದು ಎಂದರ್ಥ. ತೇಲಿದರೆ ಅದನ್ನು ಕೃತಕವಾಗಿ ಹಣ್ಣು ಮಾಡಲಾಗಿದೆ ಎಂದರ್ಥ. ಹೀಗಾಗಿ ಮಾವಿನ ಹಣ್ಣು ಸೇವನೆಗೆ ಮುಂಚೆ ಅದನ್ನು ಚೆನ್ನಾಗಿ ತೊಳೆದು ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ