ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

Krishnaveni K

ಶುಕ್ರವಾರ, 19 ಏಪ್ರಿಲ್ 2024 (12:27 IST)
ಬೆಂಗಳೂರು: ಇಂದು ವಿಶ್ವ ಲಿವರ್ ಡೇ. ಇತ್ತೀಚೆಗಿನ ದಿನಗಳಲ್ಲಿ ಅನೇಕರಿಗೆ ಕಾಡುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಪಿತ್ತಜನಾಂಕದ ಸಮಸ್ಯೆಯೂ ಒಂದು.

ಲಿವರ್ ಅಥವಾ ಪಿತ್ತಜನಕಾಂಗದ ವೈಫಲ್ಯ ಅಥವಾ ಸಮಸ್ಯೆಗಳ ಲಕ್ಷಣಗಳೇನು ಎಂದು ನಾವು ನೋಡೋಣ. ನಮ್ಮ ದೇಹದಿಂದ ವಿಷಕಾರಿ ಮತ್ತು ಬೇಡದ ಅಂಶವನ್ನು ಹೊರಹಾಕಿ ದೇಹದ ಕಾರ್ಯನಿರ್ವಹಣೆ ಸುಗಮವಾಗಿ ನಡೆಯುವಲ್ಲಿ ಲಿವರ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಡ್ಯಾಮೇಜ್ ಆದಲ್ಲಿ ಅದು ಮಾರಣಾಂತಿಕವಾಗಬಹುದು.

ಲಿವರ್ ಸಮಸ್ಯೆಯಾದಾಗ ಕೆಳ ಹೊಟ್ಟೆಯಲ್ಲಿ ಅಥವಾ ಹೊಟ್ಟೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಊದಿಕೊಳ್ಳುವುದನ್ನೂ ನೋಡಬಹುದು. ಆ ಭಾಗದಲ್ಲಿ ಚರ್ಮದಲ್ಲಿ ತುರಿಕೆ, ಹಳದಿ ಬಣ್ಣಕ್ಕೆ ತಿರುಗಬಹುದು. ಕಾಲು ಮತ್ತು ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಅದೇ ರೀತಿ ಮೂತ್ರಿಸುವಾಗ ಮೂತ್ರದ ಬಣ್ಣ ಬದಲಾವಣೆ ಅಥವಾ ನೋವು ಕಾಣಿಸಿಕೊಳ್ಳಬಹುದು. ಇನ್ನು ಮಲ ಪೇಲವ ಬಣ್ಣದಲ್ಲಿರಬಹುದು. ಸ್ವಲ್ಪ ನಡೆದಾಡುವಷ್ಟರಲ್ಲಿ ಸುಸ್ತಾಗುವುದು, ತಲೆ ಸುತ್ತಿದಂತಾಗುವುದು, ಇಲ್ಲಾ ವಾಕರಿಕೆ ಇತ್ಯಾದಿ ಲಿವರ್ ಸಮಸ್ಯೆಯ ಲಕ್ಷಣಗಳಾಗಿವೆ. ಇಂತಹ ಯಾವುದೇ ಲಕ್ಷಣಗಳು ಕಂಡುಬಂದಾಗ ತಕ್ಷಣವೇ ತಜ್ಞರ ವೈದ್ಯರನ್ನು ಕಂಡು ಪರಿಹಾರ ಕಂಡುಕೊಳ್ಳಬೇಕು. ನಿಧಾನವಾದಷ್ಟು ಲಿವರ್ ಸಮಸ್ಯೆಯ ಗಂಭೀರತೆ ಹೆಚ್ಚಾಗಬಹುದು. ಆರಂಭಿಕ ಹಂತದಲ್ಲಿ ಚಿಕಿತ್ಸೆಯಿಂದ ಸರಪಡಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ