'ರಾಮಾಯಣ' ಶೂಟಿಂಗ್ ಸೆಟ್‌ನಿಂದ ರಣಬೀರ್, ಸಾಯಿಪಲ್ಲವಿ ಲುಕ್ ಲೀಕ್

Sampriya

ಶನಿವಾರ, 27 ಏಪ್ರಿಲ್ 2024 (17:51 IST)
Photo Courtesy X
ಬೆಂಗಳೂರು: ಬಹು ನಿರೀಕ್ಷೆ ಹುಟ್ಟಿಸಿರುವ ನಿತೇಶ್ ತಿವಾರಿ ಅಭಿನಯದ 'ರಾಮಾಯಣ' ಸಿನಿಮಾದ ಶೂ    ಟಿಂಗ್‌ ಸೆಟ್‌ನಿಂದ ರಣಬೀರ್ ಹಾಗೂ ಸಾಯಿ ಪಲ್ಲವಿ ಲುಕ್ ಲೀಕ್ ಆಗಿ ವೈರಲ್ ಆಗಿದೆ.

ಫೋಟೋದಲ್ಲಿ ರಣಬೀರ್ ಸಾಂಪ್ರದಾಯಿಕ ಉಡುಗೆಯಲ್ಲಿ ಭಗವಾನ್ ರಾಮನಂತೆ ಹಾಗೂ ಸೀತೆಯ ಉಡುಪಿನಲ್ಲಿ ಸಾಯಿಪಲ್ಲವಿ   ಅವರು ಜತೆಯಾಗಿ ನಿಂತಿರುವ ಫೋಟೋ ಲೀಕ್ ಆಗಿದೆ.

ಈಗಾಗಲೇ ಹಲವು ಬಾರಿ ಸಿನಿಮಾದ ಫೋಟೊಗಳು ಲೀಕ್‌ ಆಗಿವೆ. ಇನ್ನೂ ಸಿನಿಮಾದ ದೃಶ್ಯಗಳು ಹಾಗೂ ಫೋಟೋಗಳು ಲೀಕ್ ಆಗದಂತೆ ಚಿತ್ರತಂಡ ಕ್ರಮ ಕೈಗೊಂಡರು ಇದೀಗ ಮತ್ತೇ ವೈರಲ್ ಆಗಿರುವುದು ಚಿತ್ರತಂಡಕ್ಕೆ ಬೇಸರ ತಂದಿದೆ.

ಇನ್ನೂ ಈ ಚಿತ್ರದಲ್ಲಿ ಕೆಜಿಎಫ್ ಹೀರೋ ನಟ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಅಭಿನಯಿಸಲಿದ್ದಾರೆಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡವಾಗಲೀ ಯಶ್ ಕೂಡಾ ಸ್ಪಷ್ಟಣೆಯನ್ನು ನೀಡಿಲ್ಲ.

ಇನ್ನೂ ಚಿತ್ರದ ರಾಮನ ಲುಕ್‌ಗಾಗಿ ನಟ ರಣಬೀರ್ ಅವರು ಕಠಿಣ ತರಬೇತಿಯನ್ನು ಪಡೆದು ಸಖತ್‌ ಫಿಟ್‌ ಆಗಿ ಕಾಣಿಸಿಕೊಂಡಿದ್ದಾರೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ