ಗುಡಿಸಲಿಗೆ ಹೋಗಿ ತಹಶೀಲ್ದಾರ್ ಮಾಡಿದ ಮಾದರಿ ಕೆಲಸ ಗೊತ್ತಾ?

ಶುಕ್ರವಾರ, 10 ಏಪ್ರಿಲ್ 2020 (19:12 IST)
ಬೇರೆ ರಾಜ್ಯದಿಂದ‌ ಇಲ್ಲಿಗೆ ಬಂದು ಸ್ವಯಂ ಉದ್ಯೋಗ‌ವಾಗಿ ಕಲ್ಲಿನಲ್ಲಿ ಗೃಹೋಪಯೋಗಿ ಸಮಾನುಗಳನ್ನು ಕೆತ್ತನೆ‌ ಮಾಡಿ ಮಾರಾಟದಿಂದ ಬರುವ ಅಲ್ಪ ಹಣದಲ್ಲಿ ಬದುಕು ಸಾಗಿಸುವ ಅಲೆಮಾರಿ ಜನಾಂಗದವರ ಗುಡಿಸಲಿಗೆ ತಹಸೀಲ್ದಾರ್ ಭೇಟಿ ನೀಡಿದ್ದಾರೆ.

 ಕಲಬುರಗಿಯ ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ಅವರು ಭೇಟಿ ನೀಡಿ ಸ್ವತಃ ಕಿರಾಣಿ ದಿನಸಿಗಳನ್ನು ನೀಡಿದರು.
ಲಾಕ್ ಡೌನ್ ಪರಿಣಾಮ‌ ಅಲೆಮಾರಿ, ಭಿಕ್ಷುಕರಿಗೆ, ನಿರ್ಗತಿಕರಿಗೆ ಆಹಾರ ಸಮಸ್ಯೆಯನ್ನು ಮನಗಂಡು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಇಂತವರಿಗೆ ಅಹಾರ ಸರಬರಾಜು ಮಾಡಲು ಕ್ರಮ‌ ವಹಿಸಿದೆ.

ಅಂತೆಯೆ ಶಹಾಬಾದ ಪಟ್ಟಣದ ಬಸವೇಶ್ವರ ಚೌಕ್, ಜೇವರ್ಗಿ ರಸ್ತೆಯ ಬೆಟ್ಟ ಪ್ರದೇಶ, ಭಂಕೂರ ಗ್ರಾಮದಲ್ಲಿ‌ ಟೆಂಟ್ ಹಾಕಿ ನೆಲೆಸಿರುವ ಅಲೆಮಾರಿ ಜನಾಂಗಕ್ಕೆ ಮತ್ತು ಬಡ‌ ಕೂಲಿ ಕಾರ್ಮಿಕರಿಗೆ  ತರಕಾರಿ, ಅಕ್ಕಿ, ಬೇಳೆ‌ ಹೀಗೆ ಅಡುಗೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದರು.

ಇನ್ನೂ ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಸಿದ್ಧ ಅಹಾರ, ಸ್ವಚ್ಚ ಕುಡಿಯುವ ನೀರನ್ನು ತಹಶೀಲ್ದಾರ‌ ನೇತೃತ್ವದ ಅಧಿಕಾರಿಗಳ ನೀಡಿ ಅವರು ಹಸಿವು ತಣಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ