ಬೆಳಗಾವಿ ಜಿಲ್ಲಾ ಉಸ್ತುವಾರಿಗಾಗಿ ಬಿಜೆಪಿಯಲ್ಲಿ ಮೆಗಾಫೈಟ್ ; ಬಿಎಸ್ ವೈಗೆ ಟೆನ್ಶನ್

ಮಂಗಳವಾರ, 11 ಫೆಬ್ರವರಿ 2020 (19:55 IST)
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಸಿಎಂಗೆ ಇದೀಗ ಕುಂದಾನಗರಿ ಜಿಲ್ಲಾ ಉಸ್ತುವಾರಿ ವಿಷಯ ಹೊಸ ಚಿಂತೆಗೆ ಕಾರಣವಾದಂತಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಲು ಸಚಿವ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಹಿರಿಯ ಶಾಸಕ ಉಮೇಶ್ ಕತ್ತಿ ಕೂಡ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ.

ಒಂದೇ ಜಿಲ್ಲೆಯಲ್ಲಿ ಮೂವರು ಪ್ರಭಾವಿ ನಾಯಕರು ಇರೋದ್ರಿಂದ ಸಹಜವಾಗಿಯೇ ಜಿಲ್ಲಾ ಉಸ್ತುವಾರಿ ಯಾರ ಹೆಗಲೇರಲಿದೆ ಅನ್ನೋ ಕುತೂಹಲ ಮೂಡಿಸಿದೆ.

ಯಾರೇ ಒಬ್ಬರಾದರೂ ಉಳಿದವರಿಗೆ ಅಸಮಧಾನ ಗ್ಯಾರಂಟಿ ಅನ್ನೋದನ್ನು ಮರೆಯುವಂತಿಲ್ಲ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರ್ತಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ