ಆ ಕೆಲಸಕ್ಕೆ ಕೊರೊನಾ ಕರ್ಫ್ಯೂ ಅಡ್ಡಿಯಾಗಲ್ಲ ಎಂದ ಸಚಿವ

ಸೋಮವಾರ, 30 ಮಾರ್ಚ್ 2020 (18:01 IST)
ಮಾಹಾಮಾರಿ ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ.

ಆದರೆ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿಬಂಧನೆ ಸರಕಾರ ವಿಧಿಸಿಲ್ಲ ಎಂದು ಕೃಷಿ ಸಚಿವ ಹೇಳಿದ್ದಾರೆ.

ರೈತರು ತಮ್ಮ ಜಮೀನುಗಳಲ್ಲಿ ಉಳುಮೆ, ಬಿತ್ತನೆ ಸೇರಿದಂತೆ ಫಸಲನ್ನು ಕಟಾವು ಮಾಡುವ ಕೆಲಸ ಮಾಡಬಹುದು. ಆದರೆ, ಪ್ರತಿಯೊಬ್ಬರು ಸಾಮಾಜಿಕ ಅಂತರನ್ನು ಕಾಯ್ದುಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.

ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಔಷಧಗಳನ್ನು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಉಪಕರಣಗಳು ಸೇರಿದಂತೆ ಟ್ರ್ಯಾಕ್ಟರ್ ಗಳಿಗೆ ಡೀಸೆಲ್‌ ಪೂರೈಕೆ ಮಾಡಲು ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಸಾಮಾಜಿಕ ಅಂತರವನ್ನು ಪ್ರತಿಯೊಬ್ಬರು ಕಾಯ್ದುಕೊಳ್ಳುವ ಮೂಲಕ ನಮ್ಮ ಮನೆಯಲ್ಲಿ ನಮ್ಮನ್ನು ಸ್ವಯಂ ದಿಗ್ಬಬಂಧನ ಹಾಕಿಕೊಂಡು ನಮ್ಮ ಹಾಗೂ ನಮ್ಮ ಕುಟುಂಬದವರ ಪ್ರಾಣವನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ