ಜನರಿಗೆ ರಾಮನವಮಿಯ ಶುಭಾಶಯ ಕೋರಿದ ಪ್ರಧಾನಿ, ಸಿಎಂ

ಗುರುವಾರ, 2 ಏಪ್ರಿಲ್ 2020 (11:06 IST)
ಬೆಂಗಳೂರು : ಇಂದು ರಾಮನವಮಿಯ ಹಿನ್ನಲೆಯಲ್ಲಿ ಜನರಿಗೆ ಪ್ರಧಾನಿ ಮೋದಿ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಜನರಿಗೆ ರಾಮನವಮಿಯ ಶುಭಾಶಯ ತಿಳಿಸಿದ್ದಾರೆ.


ಪ್ರಧಾನಿ ಮೋದಿ ಅವರು ಟ್ವೀಟರ್ ನಲ್ಲಿ ದೇಶದ ಜನರಿಗೆ ರಾಮನವಮಿಯ ಶುಭಾಶಯ ಕೋರಿ ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.


ಹಾಗೇ ಸಿಎಂ ಯಡಿಯೂರಪ್ಪ ಅವರು, ಶ್ರೀರಾಮನ ತ್ಯಾಗ ಸ್ಥಿತಪ್ರಜ್ಞತೆ ನಮಗೆ ಆದರ್ಶವಾಗಲಿ ಎಂದು ರಾಜ್ಯದ ಜನತೆಗೆ ರಾಮನವಮಿಯ ಶುಭಾಶಯ ಕೋರಿದ್ದಾರೆ. ಅಲ್ಲದೇ  ಕೊರೊನಾ ನಿಯಂತ್ರಿಸಲು ಧಾರ್ಮಿಕ ಆಚರಣೆ ನಿಷೇಧವಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ