ಮಹದಾಯಿ ಗೆಜೆಟ್ : ಗೋವಾ ವಿರುದ್ಧ ತೊಡೆತಟ್ಟಿದ ರಾಜ್ಯ ಸರಕಾರ

ಶುಕ್ರವಾರ, 28 ಫೆಬ್ರವರಿ 2020 (15:59 IST)
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಗೋವಾ ಸುಪ್ರೀಂಕೋರ್ಟ್ ಮೊರೆ ಹೋದರೆ ಅದಕ್ಕೆ ಪ್ರತಿಯಾಗಿ ರಾಜ್ಯ ಸರಕಾರವೂ ಕಾನೂನು ಹೋರಾಟ ನಡೆಸುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.


ಮಹದಾಯಿ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಅಧಿಸೂಚನೆ ಪ್ರಕಟ ಮಾಡಿರುವುದು ಮಹದಾಯಿ ಹೋರಾಟಕ್ಕೆ ದೊರಕಿರುವ ಗೆಲುವು ಆಗಿದೆ. 13.2 ಟಿಎಂಸಿ ನೀರು ಹಂಚಿಕೆ ಮಾಡುವ ಮೂಲಕ ರಾಜ್ಯದ ರೈತರಿಗೆ ಜಯ ದೊರಕಿದಂತಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಕಳಸಾ ಬಂಡೂರಿ ನಾಲಾ ಯೋಜನೆಗೆ ಸರಕಾರ ಕ್ರಿಯಾಯೋಜನೆ ರೂಪಿಸಲಿದೆ. ರಾಜ್ಯದ ಪಾಲಿಗೆ ಸಿಕ್ಕಿರುವ ನೀರಿನಲ್ಲಿ ಒಂದು ಹನಿ ನೀರು ಕೂಡ ವ್ಯಯ ಮಾಡದಂತೆ ಬಳಕೆ ಮಾಡಿಕೊಳ್ಳುತ್ತೇವೆ. ಜಲವಿದ್ಯುತ್ ಯೋಜನೆಗೆ ಹಾಗೂ ಕುಡಿಯುವ ನೀರಿಗಾಗಿ ಹಂಚಿಕೆ ಆಗಲಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ