ಎಸ್ಎಸ್ಎಲ್ಸಿ ಪಾಸಾದವರಿಗೂ ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ!

ಬುಧವಾರ, 5 ಫೆಬ್ರವರಿ 2020 (09:10 IST)
ನವದೆಹಲಿ: ಸರ್ಕಾರಿ ನೌಕರಿ ಪಡೆಯಬೇಕು ಎಂಬ ಕನಸು ಹೊಂದಿದ್ದೀರಾ? ಆದರೆ ಉತ್ತಮ ಪದವಿ ಅರ್ಹತೆ ಹೊಂದಿಲ್ಲವೆಂಬ ನಿರಾಸೆಯೇ? ಹಾಗಿದ್ದರೆ ಈಗ ಆ ಚಿಂತೆ ಬಿಡಿ. ಭಾರತೀಯ ರೈಲ್ವೇ ಇಲಾಖೆಯಲ್ಲಿ ನಿಮಗೆ ಒಂದು ಸುವರ್ಣಾವಕಾಶವಿದೆ.


ವೆಸ್ಟರ್ನ್ ರೈಲ್ವೇ ನೇಮಕಾತಿ ನಡೆಸುತ್ತಿದ್ದು, ಕೇವಲ ಎಸ್ಎಸ್ಎಲ್ಸಿ, ಪಿಯುಸಿ ಅಥವಾ ಐಟಿಐ ಪಾಸ್ ಮಾಡಿಕೊಂಡರೂ ಸಾಕು. ತಕ್ಷಣವೇ ಅಂದರೆ ಫೆಬ್ರವರಿ 6 ರೊಳಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಸ್ವವಿವರ ಮತ್ತು ಕವರ್ ಲೆಟರ್ ಜತೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವೆಸ್ಟರ್ನ್ ರೈಲ್ವೇ ವೆಬ್ ಸೈಟ್ ವಿಳಾಸವಾದ www.rrc.wr.com ಗೆ ಲಾಗಿನ್ ಆಗಿ. Rojgar.live ನಲ್ಲಿ ಹೆಚ್ಚಿನ ವಿವರ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ