ಜಿಯೋದ ಶೇ.2.32ರಷ್ಟು ಷೇರು ಖರೀದಿ ಮಾಡಿದ ಕೆಕೆಆರ್

ಶುಕ್ರವಾರ, 22 ಮೇ 2020 (09:53 IST)
Normal 0 false false false EN-US X-NONE X-NONE

ನವದೆಹಲಿ : ಜಿಯೋದ ಶೇ.2.32ರಷ್ಟು ಷೇರು ಖರೀದಿ ಮಾಡಿದ ಕೆಕೆಆರ್ ಜಿಯೋದಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಿದೆ.
 


 

ಒಂದೇ ತಿಂಗಳಲ್ಲಿ 5ನೇ ಕಂಪೆನಿ ಜಿಯೋದಲ್ಲಿ ಹೂಡಿಕೆ ಮಾಡಿದ್ದು, ಹೂಡಿಕೆ ಆಕರ್ಷಿಸಿ ಸಾಲದ ಹೊರೆ ಕಡಿಮೆಮಾಡಿಕೊಳ್ಳಲು  ಮುಖೇಶ್ ಅಂಬಾನಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈವರೆಗೆ ಜೀಯೋದಲ್ಲಿ 78,562ಕೋಟಿ ಹಣ ಹೂಡಿಕೆ ಮಾಡಲಾಗಿದ್ದು, ರಿಲಯನ್ಸ್ 1.6ಲಕ್ಷ ಕೋಟಿ ರೂಪಾಯಿ ಸಾಲ ಹೊಂದಿದೆ. 

 

ಈವರೆಗೆ ಜಿಯೋದ ಶೇ.17.12ರಷ್ಟು ಷೇರುಗಳು ಮಾರಾಟ ಮಾಡಲಾಗಿದ್ದು, ಷೇರು ಹಕ್ಕುಗಳಿಂದ 53,000ಕೋಟಿ ರೂಪಾಯಿ ಬರಲಿದೆ. ಇದರಿಂದಾಗಿ 30-40ಸಾವಿರ ಕೋಟಿ ಸಾಲ ಇರಲಿದೆ. ಆ ಮೂಲಕ  ಸಾಲ ಮುಕ್ತರಾಗುವ ಗುರಿಯತ್ತ ಮುಖೇಶ್ ಅಂಬಾನಿ ಸಾಗುತ್ತಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ