ಮಂಡ್ಯ ಬಿಜೆಪಿಯಲ್ಲಿ ಭಿನ್ನಮತ: ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ನಾಯಕರು

ಶನಿವಾರ, 21 ಏಪ್ರಿಲ್ 2018 (16:06 IST)
ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಗಳ ಮೂರನೇ ಪಟ್ಟಿ ರೀಲಿಸ್ ಮಾಡಿದ್ಮೇಲೆ ರಾಜ್ಯದೆಲ್ಲೆಡೆ ಸಾಕಷ್ಟು ಭಿನ್ನಮತ ಕೇಳಿಬಂದಿತ್ತು. ಹಾಗೇ ಮಂಡ್ಯದಲ್ಲೂ ಕೂಡ ಬಿಜೆಪಿ ಘೋಷಿತ ಅಭ್ಯರ್ಥಿ ಬಗ್ಗೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. 
ಇಂದು ಮಂಡ್ಯದ ಬಿಜೆಪಿ ಕಛೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಂಡ್ಯ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ವರಿಷ್ಠರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅಂತ  ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಮಂಡ್ಯ ಕ್ಷೇತ್ರದಲ್ಲಿ ಬಸವೇಗೌಡರಿಗೆ ಟಿಕೆಟ್ ನೀಡಿ ವರಿಷ್ಠರು ಜೆಡಿಎಸ್ ಗೆಲ್ಲಿಸುವ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಜೆಪಿ ಕಛೇರಿಗೆ ಬಾರದ ಬಸವೇಗೌಡರಿಗೆ ಟಿಕೆಟ್ ನೀಡಿ ಬಿಜೆಪಿ ನಾಯಕರೇ ಪಕ್ಷದ ಕತ್ತು ಕುಯ್ಯುವ ಕೆಲ್ಸ ಮಾಡ್ತಿದ್ದಾರೆ. 
 
ಕಳೆದೆರಡು ದಿನದ ಹಿಂದೆ ಜೆಡಿಎಸ್ ಪ್ರಭಾವಿ ಮುಖಂಡ ಚಂದಗಾಲು ಶಿವಣ್ಣ ಬಿಜೆಪಿ ಸೇರಿದ್ರು ಶಿವಣ್ಣರಿಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಅಂತ ಹೇಳಲಾಗ್ತಿತ್ತು ಆದ್ರೆ ಕೊನೆಗಳಿಗೆಯಲ್ಲಿ ಬಿಜೆಪಿ ಬಸವೇಗೌಡರಿಗೆ ಟಿಕೆಟ್ ನೀಡಿ‌ ಸೋಲೋ ಕ್ಯಾಂಡಿಡೇಟ್ ಆಯ್ಕೆ ಮಾಡಿದೆ. ಹಾಗಾಗಿ ನಾವೆಲ್ಲರೂ ಬಿಜೆಪಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸೋದಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ