15,000 ವರ್ಷ ಹಳೆಯ ಹಿಮಗಡ್ಡೆಯಲ್ಲಿ ವೈರಸ್ ಪತ್ತೆ, ವಿಜ್ಞಾನಿಗಳಿಗೂ ಶಾಕ್!

ಶುಕ್ರವಾರ, 23 ಜುಲೈ 2021 (10:18 IST)
ಟಿಬೆಟ್(ಜು.22): ವಿಶ್ವಾದ್ಯಂತ ಕೊರೋನಾ ಸೋಂಕು ಹಬ್ಬಿದಾಗಿನಿಂದ, ಜನರು ವೈರಸ್ ಬಗ್ಗೆ ಹೆಚ್ಚು ಎಚ್ಚರ ವಹಿಸುತ್ತಿದ್ದಾರೆ. ವೈರಸ್ಗಳು ಎಷ್ಟು ಅಪಾಯಕಾರಿ ಎಂದು ಈ ಸೋಂಕು ಸಾಬೀತುಪಡಿಸಿದೆ. ಇನ್ನು ವಿಜ್ಞಾನಿಗಳಿಗೂ ಈ ಕೊರೋನಾ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಆದರೆ ಇತ್ತೀಚೆಗಷ್ಟೇ ಆವಿಷ್ಕಾರವೊಂದು ನಡೆದಿದ್ದು, ಇದರಲ್ಲಿ ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿರುವ 15 ಸಾವಿರ ವರ್ಷಗದ ಹಳೆಯ ಹಿಮಗಡ್ಡೆಯಲ್ಲಿ ಮಾದರಿಗಳಲ್ಲಿ ವೈರಸ್ಗಳು ಪತ್ತೆಯಾಗಿವೆ. ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ ಎಂಬುವುದು ಉಲ್ಲೇಖನೀಯ.


* ವಿಶ್ವಾದ್ಯಂತ ಕೊರೋನಾ ಸೋಂಕಿನ ಅಬ್ಬರ
* ವೈರಸ್ಗಳ ಬಗ್ಗೆ ಅತ್ಯಂತ ಎಚ್ಚರ ವಹಿಸುತ್ತಿರುವ ಜನ ಸಾಮಾನ್ಯರು
* 15,000 ಹಳೆಯ ಹಿಮಗಡ್ಡೆಯಲ್ಲಿ ವೈರಸ್ ಪತ್ತೆ, ವಿಜ್ಞಾನಿಗಳಿಗೂ ಶಾಕ್!

ಮೊದಲ ಬಾರಿ ಇಂತಹ ವೈರಸ್ ಪತ್ತೆ
ಈ ವೈರಸ್ಗಳಲ್ಲಿ ಬಹುತೇಕ ವೈರಸ್ಗಳು ಸಾವಿರಾರು ವರ್ಷಗಳಿಂದ ಮಂಜುಗಡ್ಡೆಯಲ್ಲಿ ಹೆಪ್ಪುಗಟ್ಟಿದ್ದ ಕಾರಣ ಇವುಗಳು ಬದುಕುಳಿದಿವೆ. ಇನ್ನು ಈ ವೈರಸ್ಗಳು ಇಲ್ಲಿಯವರೆಗೆ ಪತ್ತೆಯಾದ ಎಲ್ಲಾ ವೈರಸ್ಗಳಿಗಿಂತ ಭಿನ್ನ ಎಂಬುವುದು ಉಲ್ಲೇಖನೀಯ. ಅಂದರೆ ವಿಜ್ಞಾನಿಗಳಿಗೂ ಇಂತಹ ವೈರಸ್ಗಳ ಬಗ್ಗೆ ತಿಳಿದಿರಲಿಲ್ಲ. ಈ ಅಧ್ಯಯನದ ಫಲಿತಾಂಶಗಳನ್ನು ಮೈಕ್ರೋಬಯೋಮ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆ ವಿಜ್ಞಾನಿಗಳಿಗೆ ವೈರಸ್ ವಿಕಾಸವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹಿಮಗಡ್ಡೆಯಲ್ಲಿ ವೈರಸ್
ಈ ಸಂಶೋಧನೆಗಾಗಿ, ವಿಜ್ಞಾನಿಗಳು ಹಿಮಗಡ್ಡೆಯಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳು ಮತ್ತು ವೈರಸ್ಗಳ ಅಧ್ಯಯನ ಮಾಡುವ ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಮಂಜುಗಡ್ಡೆಯಲ್ಲಿ ಸೋಂಕನ್ನು ಉಂಟುಮಾಡದ ಸೂಕ್ಷ್ಮಜೀವಿಗಳನ್ನು ವಿಶ್ಲೇಷಿಸುವ ವಿಧಾನ ಇದು. ನಿಧಾನವಾಗಿ ರೂಪುಗೊಂಡ ಹಿಮನದಿಗಳಿಂದ ಈ ಹಿಮಗಡ್ಡೆ ಸಿಕ್ಕಿದೆ. ಇದರಲ್ಲಿ ಧೂಳು, ಅನಿಲ ಮತ್ತು ಅನೇಕ ವೈರಸ್ಗಳು ಹೆಪ್ಪುಗಟ್ಟಿದ್ದವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಾಚೀನ ಪರಿಸರದ ಅಧ್ಯಯನ
ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಬ್ರಿಡ್ಜ್ ಪೋಲಾರ್ ಮತ್ತು ಹವಾಮಾನ ಸಂಶೋಧನಾ ಕೇಂದ್ರದ ಅಧ್ಯಯನದ ಪ್ರಮುಖ ಲೇಖಕ ಮತ್ತು ಸಂಶೋಧಕ ಕ್ಸಿ-ಪಿಂಗ್ ಝೋಂಗ್, ಪಶ್ಚಿಮ ಚೀನಾದಲ್ಲಿನ ಹಿಮನದಿಗಳ ಸರಿಯಾದ ಅಧ್ಯಯನ ಮತ್ತು ಅವರು ಹೊಂದಿದ್ದ ಪ್ರಾಚೀನ ಪರಿಸರಗಳ ಬಗ್ಗೆ ಮಾಹಿತಿ ಪಡೆಯುವುದು ಇದರ ಉದ್ದೇಶವಾಗಿತ್ತು ಎಂದಿದ್ದಾರೆ. ತಂಡವು 2015 ರಲ್ಲಿ ಪಶ್ಚಿಮ ಚೀನಾದ ಗುಲಿಯಾ ಐಸ್ ಕ್ಯಾಪ್ನಿಂದ ತೆಗೆದ ಐಸ್ ಅನ್ನು ವಿಶ್ಲೇಷಿಸಿದೆ, ಇವುಗಳಲ್ಲಿ ವೈರಸ್ಗಳೂ ಪತ್ತೆಯಾಗಿವೆ.
ಎಷ್ಟು ವೈರಸ್ಗಳು ಪತ್ತೆಯಾದವು?
ಈ ಮಾದರಿಗಳನ್ನು ಎತ್ತರದಿಂದ ತೆಗೆದುಕೊಳ್ಳಲಾಗಿದ್ದು, ಇದು ಹಿಮನದಿ ಹುಟ್ಟುವ ಸ್ಥಳದಿಂದ ಗುಲಿಯಾದ ಮೇಲ್ಭಾಗದಲ್ಲಿದೆ. ಈ ಸ್ಥಳ ಸಮುದ್ರ ಮಟ್ಟದಿಂದ 22 ಸಾವಿರ ಅಡಿ ಎತ್ತರದಲ್ಲಿದೆ. ಹಿಮಗಡ್ಡೆಯನ್ನು ವಿಶ್ಲೇಷಿಸಿದಾಗ, ಸಂಶೋಧಕರು 33 ವೈರಸ್ಗಳ ಆನುವಂಶಿಕ ಸಂಕೇತವನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ನಾಲ್ಕು ವೈಜ್ಞಾನಿಕ ಸಮುದಾಯದಿಂದ ಈಗಾಗಲೇ ಗುರುತಿಸಲ್ಪಟ್ಟಿದೆ. ಅದೇ ಸಮಯದಲ್ಲಿ, 28 ವೈರಸ್ಗಳು ಸಂಪೂರ್ಣವಾಗಿ ಹೊಸದಾಗಿವೆ.
ಹಿಮಗಡ್ಡೆಯಿಂದ ಬಚಾವ್
ಈ ವಿಶ್ಲೇಷಣೆಯಲ್ಲಿ, ಅರ್ಧದಷ್ಟು ವೈರಸ್ಗಳು ಹೆಪ್ಪುಗಟ್ಟಿದ ಪರಿಣಾಮ ಉಳಿದುಕೊಂಡಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇನ್ನು ಓಹಿಯೋ ರಾಜ್ಯದ ಸೂಕ್ಷ್ಮ ಜೀವವಿಜ್ಞಾನದ ಪ್ರಾಧ್ಯಾಪಕ ಮ್ಯಾಥ್ಯೂ ಸುಲ್ಲಿವಾನ್, ಇವು ವಿಪರೀತ ವಾತಾವರಣದಲ್ಲಿಯೂ ಸಹ ಬದುಕಬಲ್ಲ ವೈರಸ್ಗಳಾಗಿವೆ ಎಂದು ಹೇಳಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ