ಅಮೀರ್ ಖಾನ್ ಅಂಗಾಂಗ ದಾನಕ್ಕೆ ಸಿದ್ಧ ... ಮಿ. ಪರ್ಫೆಕ್ಟ್ ಅಂದ್ರೆ ಸುಮ್ನೆನಾ !

ಬುಧವಾರ, 2 ಏಪ್ರಿಲ್ 2014 (10:20 IST)
PR
ಮಾನವ ಶರೀರದಲ್ಲಿ ಕೆಲವು ಅಂಗಾಂಗಗಳು ಮತ್ತೊಂದು ಜೀವಕ್ಕೆ ಉಪಯುಕ್ತ. ಅಂತಹ ಕೆಲಸವನ್ನು ಮಾಡಿ ಎನ್ನುವ ಮಾತನ್ನು ಸದಾ ತಿಳಿದವರು ಹೇಳ್ತಾರೆ, ಕಣ್ಣು, ಕಿಡ್ನಿಯಂತಹ ಅಂಗಗಳನ್ನು ಅಗತ್ಯ ಇರುವ ದೇಹಗಳಿಗೆ ಕಸಿ ಮಾಡುವುದರ ಮುಖಾಂತರ ಆ ವ್ಯಕ್ತಿಯ ಜೀವದಾನಕ್ಕೆ ಕಾರಣರಾಗ ಬಹುದು ನಾವು.

ಸತ್ತ ಮೇಲೆ ನೀವು ನಿಮ್ಮ ಅಂಗಾಗ ದಾನ ಮಡಿ ಅಂತ ಹೇಳಿದರೆ ಅದು ಹೇಗೆ ಸಾಧ್ಯ ಬಿಡಿ ಎಂದು ಜನರು ಸುಮ್ಮನಾಗುವುದು ಸಹಜ. ಆದರೆ ಅದಕ್ಕೆಂದು ಒಂದು ಸಂಸ್ಥೆಯಿದೆ, ಅಲ್ಲಿ ನಮ್ಮ ಹೆಸರನ್ನು ನೋಂದಾಯಿಸಿದರೆ ನಮ್ಮ ಕನಸು ನೆರವೇರಿಸ ಬಹುದಾಗಿದೆ.

PR
ಅಂತಹ ಉತ್ತಮ ಕೆಲಸ ಅಮೀರ್ ಖಾನ್ ಮಾಡಿದ್ದಾರೆ. ಬಾಲಿವುಡ್ ನ ಈ ಕಲಾವಿದ ಇತ್ತೀಚೆಗೆ ತಮ್ಮ ಅಂಗಾಂಗ ದಾನಕ್ಕೆ ಸಂಬಂಧ ಪಟ್ಟಂತೆ ಮುಂಬೈನ ಕೆಇಎಮ್ ಆಸ್ಪತ್ರೆಯಲ್ಲಿ ಡೊನೇಶನ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲು ಮಾಡಿದ್ದರು ..

ನಾನು ಅಮೀರ್ ಖಾನ್. ವಯಸ್ಸು 49ವರ್ಷ. ತಾಹೀರ್ ಹುಸೇನ್ ಖಾನ್ ಮಗ. ಮುಂಬೈ ನಿವಾಸಿ. ನಾನು ಮತ್ತು ನನ್ನ ಪತ್ನಿ ಕಿರಣ್ ಅನೇಕ ಸಮಯದಿಂದ ಅಂಗಾಂಗ ದಾನದ ಬಗ್ಗೆ ಚರ್ಚಿಸಿದೆವು. ಅದಕ್ಕೆ ಈ ಕಾಲ ಕೂಡಿ ಬಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು ಅಮೀರ್. ಅಂತು ಎಲ್ಲ ವಿಷಯದಲ್ಲೂ ಅಮೀರ್ ಭಿನ್ನ ಅಂತ ಸಾಬೀತು ಮಾಡಿದ್ದಾರೆ ಬಾಲಿವುಡ್ ನಲ್ಲಿ ಮತ್ತೊಮ್ಮೆ !

ವೆಬ್ದುನಿಯಾವನ್ನು ಓದಿ