ಅದಾಗಲೇ ಕತ್ರಿನಾ ಕೈಫ್ ಇಂಡಸ್ಟ್ರಿಗೆ ಬಂದು ಹದಿಮೂರು ವರ್ಷಗಳಾಗಿವೆ. ಆರಂಭದಲ್ಲಿ ಸರಿಯಾಗಿ ನಟನೆ ಮಾಡಲು ಬರಲ್ಲ ಈ ಹುಡುಗಿಗೆ ಅಂದವರ ಮುಂದೆ ನಟನೆ ಕಲಿತು ಸೈ ಅನ್ನಿಸಿಕೊಂಡ ಚೆಲುವೆ, ಇದೇನು ಈ ರೀತಿ ಡ್ಯಾನ್ಸ್ ಮಾಡ್ತಾಳೆ ಎಂದು ನಕ್ಕವರ ಎದುರು ಒಳ್ಳೆಯ ಡ್ಯಾನ್ಸ್ ಆಡಿ ತೋರಿದ್ದಳು ತನ್ನ ಚಿತ್ರದ ಮುಖಾಂತರ.
ಹೀಗೆ ಹಿಂದೆಲ್ಲ ತಾಮಾಷೆ ಮಾಡುವಂತೆ ಇದ್ದ ಕತ್ರಿನಾ ಈಗ ಎಲ್ಲರ ಹೊಗಳಿಕೆಗೆ ಪಾತ್ರ ಆಗುವಷ್ಟು ವಿಶೇಷವಾಗಿ ಬೆಳೆದಿದ್ದಾಳೆ ಎನ್ನುವುದು ಸುಳ್ಳಲ್ಲ .ಅಲ್ಲದೆ ಬಾಲಿವುಡ್ ಟಾಪ್ ಹೀರೋಯಿನ್ ಗಳ ಲಿಸ್ಟ್ನಲ್ಲಿ ಕತ್ರಿನಾಳಿಗೂ ಸಹಿತ ಪಾಲು ದಕ್ಕಿದೆ. ಆದರೂ ಸಹಿತ ಇತ್ತೀಚಿಗೆ ಆಕೆಗೆ ಬೇಸರ , ಅಸಂತೃಪ್ತಿ ಉಂಟಾಗಿದೆ ಎಂದೇ ಹೇಳ ಬಹುದಾಗಿದೆ.
PR
ಇಷ್ಟೆಲ್ಲಾ ಓಕೆ ಇರುವಾಗ .. ಬೇಸರ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಮುಖ್ಯ ಕಾರಣ ಕಂಗನ ನಟನೆಯ ಕ್ವೀನ್ ಚಿತ್ರ.ಆ ಚಿತ್ರದಲ್ಲಿ ಕಂಗನ ಪಾತ್ರವನ್ನು ಕಂಡು ಫಿದಾ ಆಗಿದ್ದಾರೆ ಈಕೆ. ಸ್ಟಾರ್ಗಳು, ಡ್ಯಾನ್ಸ್ ಹೆಚ್ಚು ಕಾಲ ಜನರ ಮನದಲ್ಲಿ ಉಳಿಯುವುದಿಲ್ಲ.
ನನಗೆ ಕಂಗನಾ ನಟನೆ ನೋಡಿದ ಬಳಿಕ ಇಂತಹ ಒಂದು ಪಾತ್ರ ಸಿಗಲಿಲ್ಲವಲ್ಲ ಅಂತ ಬೇಸರ ಆಗಿದೆ. ಈ ರೀತಿಯ ಅಭಿನಯ ಚಿರಸ್ಥಾಯಿ ಆಗಿರುತ್ತದೆ ಎನ್ನುವ ಮಾತನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾಳೆ ಆಕೆ. ಕತ್ರಿನ ನೋವನ್ನು ನಿರ್ಮಾಪಕ- ನಿರ್ದೇಶಕರೇ ದೂರ ಮಾಡಬೇಕಷ್ಟೆ!