ತೆಲುಗು ಚೆರ್ರಿ ಬಾಲಿವುಡ್ ಮೋಸ್ಟ್ ಸೆಕ್ಸಿಯಸ್ಟ್ ಮ್ಯಾನ್ ಅಂತೆ !
ಮಂಗಳವಾರ, 1 ಏಪ್ರಿಲ್ 2014 (13:01 IST)
ಟಾಲಿವುಡ್ ನಲ್ಲಿ ಯಶಸ್ಸು ಕಂಡಿದ್ದ ರಾಮ್ ಚರಣ್ ಅವರು ಬಾಲಿವುಡ್ ನಲ್ಲೂ ಜಂಜೀರ್ ಚಿತ್ರದಲ್ಲಿ ನಟಿಸಿದ್ದರು. ಆದರೆ ಅದ್ಯಾಕೋ ಆ ಚಿತ್ರ ಅವರ ಕೈ ಹಿಡಿಯಲೇ ಇಲ್ಲ. "ಬಾಲಿವುಡ್ ಸಹವಾಸ ಸಾಕು, ಇನ್ನೆಂದಿಗೂ ಅ ಕಡೆ ತಲೆ ಹಾಕಿ ಕೂಡ ಮಲಗುವುದು ಬೇಡ" ಎಂದುಕೊಳ್ಳುವಷ್ಟು ಆಘಾತವನ್ನು ಅದು ನೀಡಿತು. ಆದರೆ ಅವರ ಈ ನಿರ್ಧಾರ ಬದಲಾಯಿಸುವಂತಹ ಒಂದು ಸನ್ನಿವೇಶ ಎದುರಾಗಿದೆ. ಅವರ ಬಾಲಿವುಡ್ ಕನಸನ್ನು ನನಸು ಮಾಡಲು ಯೋಗ್ಯವಾದ ಒಂದು ಸರ್ವೆಯು ಅವರಲ್ಲಿ ಮತ್ತೆ ಸಮಾಧಾನದ ನಿಟ್ಟುಸಿರನ್ನು ತಂದಿದೆ. ಚೆರ್ರಿ ಮುಖದಲ್ಲಿ ಮತ್ತೆ ನೆಮ್ಮದಿಯ ಆನಂದ!
ಇತ್ತೀಚಿಗೆ ಬಾಲಿವುಡ್ ಗೆ ಸೇರಿರುವ ಪತ್ರಿಕೆಯೊಂದು ನಡೆಸಿದ ಟಾಪ್ ಸೆಕ್ಸಿಯಸ್ಟ್ ಆಕ್ಟರ್ ಆಫ್ ಬಾಲಿವುಡ್ ಎನ್ನುವ ಸರ್ವೆಯಲ್ಲಿ ರಾಮ ಚರಣ್ ಗೆ ಐದನೆಯ ಸ್ಥಾನ ಲಭ್ಯವಾಗಿದೆ. ಮಿಲ್ಕಿ ಹೀರೋ ರಣಬೀರ್ ಕಪೂರ್ ಗೆ ಮೊದಲ ಸ್ಥಾನ ಸಿಕ್ಕಿದೆ. ಶಾಹಿದ್ ಕಪೂರ್ ಗೆ ಎರಡನೇ ಸ್ಥಾನ ಸಿಕ್ಕರೆ ದೀಪಿಕಾ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಗೆ ಮೂರನೇ ಸ್ಥಾನ ಲಭ್ಯವಾಗಿದೆ. ನಾಲ್ಕನೇ ಜಾಗವನ್ನು ವರುಣ್ ಧವನ್ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಐದನೇ ಸ್ಥಾನ ಟಾಲಿವುಡ್ ಹೀರೋ ರಾಮ್ ಚರಣ್ ಅವರ ಕೈ ಸೇರಿದೆ. ನಟಿಸಿದ ಒಂದೇ ಒಂದು ಚಿತ್ರ ತೋಪಾದರೂ ಸಹ, ತನ್ನನ್ನು ಮೋಸ್ಟ್ ಸೆಕ್ಸಿಯಷ್ಟ್ ಹೀರೋ ಎಂದು ಗುರುತಿಸಿರುವ ಬಾಲಿವುಡ್ ಪ್ರೇಕ್ಷಕರ ಈ ನಡವಳಿಕೆಯಿಂದ ಚೆರ್ರಿಗೆ ಸಕತ್ ಖುಷಿ ಆಗಿದೆ .