ನನಗೆ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲವೆಂದ ಮೋನಿಷ ಕೊಯಿರಾಲ

ಶುಕ್ರವಾರ, 4 ಏಪ್ರಿಲ್ 2014 (09:16 IST)
PR
ಮತ್ತೆ ತೆರೆಯ ಮೇಲೆ ನಟಿಸಲು ಮೋನಿಷ ಕೊಯಿರಾಲ್ಗೆ ಇಷ್ಟವಂತೆ. ಆದರೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಯಾವುದೇ ರೀತಿಯ ಆಸಕ್ತಿ ಇಲ್ಲ ಎಂದಿದ್ದಾರೆ . 43ರ ಹರೆಯದ ಈ ಚೆಲುವೆ ಕಾಮೋಷಿ, 1942:ಎ ಲವ್ ಸ್ಟೋರಿ, ಬಾಂಬೆ, ದಿಲ್ ಸೆ ಚಿತ್ರಗಳಲ್ಲಿ ಮನಸ್ಮರಣೀಯ ಪಾತ್ರಗಳಲ್ಲಿ ನಟಿಸಿದ್ದರು.

PR
ನನಗೆ ಮತ್ತೆ ನಟಿಸಲು ಆಸೆ ಆಗುತ್ತಿದೆ. ನಾನು ಪುನಃ ನಟಿಸ ಬೇಕು. ನನಗೆ ಅವಕಾಶಗಳು ಬರುತ್ತಿವೆ. ಆದರೆ ಪಾತ್ರಗಳಲ್ಲಿ ಗಟ್ಟಿತನ ಇದ್ದಾಗ ನಟಿಸಲು ಹೆಚ್ಚು ಖುಷಿ. ನನಗೆ ಕೇವಲ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಆಸಕ್ತಿ ಇಲ್ಲ. ಉತ್ತಮ ನಿರ್ದೇಶಕರು, ಅತ್ಯುತ್ತಮ ಕಥೆಗಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಒವಾರಿಯನ್ ಕ್ಯಾನ್ಸರ್ ಗೆಂದು ಚಿಕಿತ್ಸೆ ಪಡೆದ ಈ ತಾರೆ ಈಗ ಗುಣಮುಖರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ