ನಾನು ನನ್ನ ತಂದೆ ಪರ ಚುನಾವಣ ಪ್ರಚಾರ ಮಾಡಲ್ಲ - ಸೋನಾಕ್ಷಿ ಸಿನ್ಹ
ಸೋಮವಾರ, 7 ಏಪ್ರಿಲ್ 2014 (10:02 IST)
PR
ಈಗ ಲೋಕ ಸಭಾ ಚುನಾವಣ ಕಾಲ. ಯಾವ ಚಿತ್ರರಂಗಕ್ಕೆ ಹೋದರು ಸಹಿತ ಅಲ್ಲಿನ ಕಲಾವಿದರು ತಪ್ಪದೆ ತಮ್ಮ ಆಶಯ ಹೇಳುತ್ತಿದ್ದಾರೆ,ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಕೆಲವರು ತಪ್ಪದೆ ತಮ್ಮ ಸಪೋರ್ಟ್ ಸಹ ಬಹಿರಂಗವಾಗಿ ತೋರುತ್ತಿದ್ದಾರೆ. ಈ ವಿಷಯಕ್ಕೆ ಬಂದರೆ ಬಾಲಿವುಡ್ ನಲ್ಲಿರುವ ಈಗಿನ ಚಾಲ್ತಿ ನಟಿ ಸೋನಾಕ್ಷಿ ಸಿನ್ಹ ಸಹ ರಾಜಕೀಯದ ಬಗ್ಗೆ ಮಾತಾಡೋಕೆ ಸುರು ಹಚ್ಚಿದ್ದಾಳೆ .
ಆಕೆ ಪ್ರಕಾರ ದೇಶಕ್ಕೆ ಈಗ ಒಂದೊಳ್ಳೆ ಸರ್ಕಾರದ ಅಗತ್ಯ ಇದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಬೇಕಾಗಿದೆ. ಹೀಗೆ ಮಾತನಾಡುವಾಗ ಆಕೆ ತನ್ನ ತಂದೆ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹ ಅವರಿಗೆ ಚುನಾವಣಾ ಪ್ರಚಾರಕ್ಕೆ ತಾನು ಹೋಗುವ ಅಗತ್ಯ ಇಲ್ಲ ಎನ್ನುವ ಸಂಗತಿ ಹೇಳಿದ್ದಾಳೆ.