ನಾನು ಹಿಂದಿ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ನಟಿಸಲ್ಲ ಇದು ಕರೀನಾ ವಟ ವಟ !

ಗುರುವಾರ, 10 ಏಪ್ರಿಲ್ 2014 (10:03 IST)
PR
ಹಾಡೊಂದಕ್ಕೆ ಬಂದು ಕರೀನ ಕಪೂರ್ ನಟಿಸುತ್ತಾಳೆ ಎನ್ನುವ ಸುದ್ದಿ ಹರಡಿತ್ತು ಬಾಲಿವುಡ್ ನಲ್ಲಿ. ಆ ಚಿತ್ರ ಅಂಜಾನ್, ಅದರಲ್ಲಿ ತಮಿಳಿನ ಸೂಪರ್ ಸ್ಟಾರ್ ಸೂರ್ಯ ನಟಿಸುತ್ತಾ ಇದ್ದಾರೆ. ಈ ಚಿತ್ರದ ಮೂಲಕ ಕರೀನಾ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗ್ತಾ ಇದ್ದಾಳೆ ಎನ್ನುವ ಸುದ್ದಿ ಇತ್ತೀಚೆಗೆ ಹೆಚ್ಚು ಹರಡಿತ್ತು.

ಈ ವಿಷಯವನ್ನು ಆ ಚಿತ್ರದ ನಿರ್ದೇಶಕ ಲಿಂಗು ಸ್ವಾಮಿ ಅವರು ಹೇಳಿದ್ದಾರೆ ಎನ್ನುವ ಸುದ್ದಿ ಜ್ವರದಂತೆ ಹರಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ರೇಗಿ ಕೆಂಡಾಮಂಡಲ ಆಗಿದ್ದಾಳೆ ಕರೀನ .. ಇಂತಹ ಸುದ್ದಿ ಹೇಗೆ ಹರದುತ್ತೋ ನನಗೆ ಗೊತ್ತಿಲ್. ನಾನು ಆ ಚಿತ್ರದಲ್ಲಿ ಸಹಿ ಮಾಡಿಲ್ಲ.

ಲಿಂಗು ಸ್ವಾಮಿ ಯಾರೋ ಇಲ್ಲವೇ ಸೂರ್ಯ ಯಾರು ಅನ್ನುವುದೇ ನನಗೆ ಗೊತ್ತಿಲ್ಲ . ನನಗೆ ಹಿಂದಿಯೇತರ ಭಾಷೆಗಳಲ್ಲಿ ನಟಿಸೋಕೆ ಇಷ್ಟ ಇಲ್ಲ ಅದು ದಕ್ಷಿಣ ಭಾರತ ಆಗಿರಲಿ ಇಲ್ಲವೇ ಹಾಲಿವುಡ್ ಆಗಿರಲಿ ಎಂದು ಬಾಯ್ ಬಾಯ್ ಬಡೆದು ಕೊಂಡಿದ್ದಾಳೆ .

ವೆಬ್ದುನಿಯಾವನ್ನು ಓದಿ