ಸೆಕ್ಸಿ ಕಂಗನ ಮನಸೆಳೆದ ಹೀರೋ ಯಾರು ಗೊತ್ತೇ?

ಬುಧವಾರ, 2 ಏಪ್ರಿಲ್ 2014 (15:54 IST)
ಬಾಲಿವುಡ್ ಟಾಪ್ ಹೀರೋಯಿನ್ಗಳಲ್ಲಿ ಸೆಕ್ಸಿ ಹೀರೊಯಿನ್ ಕಂಗನಾ ರನೌಟ್ ಸಹ ಒಬ್ಬಾಕೆ. ಕ್ರಿಶ್ 3 ಮುಖಾಂತರ ತಾನು ಕಡಿಮೆ ಅಲ್ಲ ಎನ್ನುವ ಸಂಗತಿಯನ್ನು ಬಾಲಿವುಡ್ ಮಂದಿಗೆ ತೋರಿದ್ದಾಳೆ ಆಕೆ. ಈ ಚಿತ್ರದಿಂದ ಆಕೆಯ ಇಮೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದ್ದು ಸತ್ಯ.

ಈ ನಟಿಯ ಮತ್ತೆರಡು ಚಿತ್ರಗಳು ಬಿಡುಗಡೆಗೆ ಸಿದ್ಧ ಆಗುತ್ತಿದೆ. ಕಂಗನಾಗೆ ಇವೆಲ್ಲದರ ಮಧ್ಯೆ ಟಾಲಿವುಡ್ ನಲ್ಲಿ ನಟಿಸುವ ಆಸೆ ಉಂಟಾಗಿದೆ. ಈಗಾಗಲೇ ಈ ನಟಿ ಏಕ್ ನಿರಂಜನ್ ಸಿನಿಮಾದಲ್ಲಿ ತನ್ನ ಪ್ರತಿಭೆ ತೋರಿದ್ದಳು. ಆ ಬಳಿಕ ಇತ್ತ ಕಡೆ ಮುಖ ಹಾಕಿರಲಿಲ್ಲ ! ಈಗ ಮತ್ತೆ ತೆಲುಗು ಚಿತ್ರದಲ್ಲಿ ನಟಿಸುತ್ತೇನೆ, ಆದರೆ ತನಗೆ ಮಹೇಶ್ ಬಾಬು ಹೀರೋ ಆಗ ಬೇಕು ಎನ್ನುವ ಆಶಯ ಇಟ್ಟಿದ್ದಾಳೆ ಈ ಹಿಮಾಚಲ ಸುಂದರಿ. ಅಷ್ಟೇ ಅಲ್ಲದೆ ಮಹೇಶ್ ಬಾಬು ಅವರ ಜೊತೆ ನಟಿಸಲು ತಾನು ಸಿದ್ಧ, ಜೊತೆಗೆ ಸಂಭಾವನೆ ಬಗ್ಗೆಯೂ ಸಹ ಹೆಚ್ಚು ಚಿಂತೆ ಮಾಡಲ್ಲ ಎನ್ನುವ ಸಂಗತಿ ಸಹ ಹೇಳಿದ್ದಾಳೆ ಆಕೆ.

PR
ತಾನು ಸಿನಿಮಾ ರಂಗದಲ್ಲಿ ಮಹೇಶ್ ಬಾಬು ಅವರಂತಹ ಸುಂದರನನ್ನು ಕಾಣಲೇ ಇಲ್ಲ, ಅಂತ ತುಂಬಾ ದೊಡ್ಡ ಸ್ಟಾರ್ ಎಂದೆಲ್ಲ ಹೇಳಿ ಮಹೇಶ್ ಬಾಬು ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾಳೆ ಆ ಚೆಲುವೆ.

ಮಹೇಶ್ ಬಾಬು ಜೊತೆ ನಟಿಸಲು ಹೀರೋಯಿನ್ ಗಳು ಸಾಲು ಗಟ್ಟಿ ನಿಂತಿದ್ದರು ಸಹ ಮಹೇಶ್ ವರ್ಷಕ್ಕೊಂದರಂತೆ ಮಾತ್ರ ನಟಿಸುವುದು. ಇನ್ನು ಕಂಗನಾಗೆ ಎಂದು ಚಾನ್ಸ್ ಸಿಗುತ್ತೋ ಕಾದು ನೋಡುವಾ !

ವೆಬ್ದುನಿಯಾವನ್ನು ಓದಿ