ಕೆಲವರ ಅದೃಷ್ಟವೇ ಹಾಗಿರುತ್ತೆ. ಅನೇಕ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿದರು ಸಹ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರುವುದಿಲ್ಲ. ಶ್ರದ್ಧಾ ದಾಸ್ ಕಥೆನೂ ಅದೇ ರೀತಿಯದ್ದಾಗಿದೆ. ಈಕೆಸಿದ್ದು ಫ್ರಮ್ ಶ್ರೀ ಕಾಕುಳಂ ಚಿತ್ರದ ಮುಖಾಂತರ ಚಿತ್ರರಂಗಕ್ಕೆ ಎಂಟ್ರಿ ಆದರು. ತಮ್ಮ ಮಾದಕತೆಯಿಂದ ಎಲ್ಲರ ಗಮನ ಸೆಳೆಯೋಕೆ ಪ್ರಯತ್ನ ಪಟ್ಟರು ಸಹ ಯಶಸ್ಸು ಸಿಗಲಿಲ್ಲ.
ಅಂದಂಗೆ ಆಕೆ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಸಿಕ್ಕಾಪಟ್ಟೆ ಎಕ್ಸ್ಪೋಸ್ ಮಾಡಿದ್ದ ಈ ಚೆಲುವೆ ಕೊನೆ ಸಿಕ್ಕ ಪಾತ್ರಗಳಲಿ ನಟಿಸುವತ್ತ ಗಮನ ನೆಟ್ಟರು, ಆದರು ಹೇಳಿಕೊಳ್ಳುವಂತಹ ಯಶ ಸಿಗಲೇ ಇಲ್ಲ. ಏನೇ ಕಷ್ಟ ಪಟ್ಟರು ಪ್ರೇಕ್ಷಕರಿಗೆ ಆಕೆ ಇಷ್ಟ ಆಗಲಿಲ್ಲ ಎನ್ನುವುದ ಸತ್ಯ.
PR
ಇವೆಲ್ಲ ಸಂಗತಿಗಳನ್ನು ಗಮನಿಸಿದ ಆ ಚೆಲುವೆ ಈಗ ತನ್ನನ್ನು ತಾನು ಹೊಸ ರೀತಿಯಲ್ಲಿ ತೋರಿಸಿಕೊಳ್ಳುವತ್ತ ಗಮನ ನೆಟ್ಟಿದ್ದಾರೆ. ಈಗ ತನ್ನ ಹೊಸ ಚಿತ್ರದಲ್ಲಿ ಆಕೆ ಖಳನಾಯಕಿ ಆಗುವುದಕ್ಕೆ ಸಿದ್ಧ ಆಗಿದ್ದಾರೆ. ಆ ಮುಖಾಂತರ ತನ್ನ ಪ್ರತಿಭಾ ಪ್ರದರ್ಶನ ಮಾಡಲು ಸಿದ್ಧ ಆಗುತ್ತಿದ್ದಾರೆ ಆಕೆ.
ಈಗ ಆಕೆಯ ಗಮನ ಹೊಸ ಚಿತ್ರ ರೇಯ್ ಕಡೆಗೆ ಇದೆ. ಅಕಸ್ಮಾತ್ ಆ ಚಿತ್ರ ಗೆಲುವು ಕಂಡರೆ ತನಗೆ ಅವಕಾಶಗಳ ಸುರಿಮಳೆ ಆಗುತ್ತದೆ ಎನ್ನುವ ಭಾವನೆ ಹೊಂದಿದ್ದಾಳೆ ಈ ಚೆಲುವೆ. ಹಾಗೇನಾದರೂ ಆದಲ್ಲಿ ಸೆಕ್ಸಿ ಖಳನಾಯಕಿಯನ್ನು ನೋಡುವ ಸೌಭಾಗ್ಯ ಚಿತ್ರ ಪ್ರಿಯರಿಗೆ .. !